`ಸ್ಪುರದ್ರೂಪಿ` ರಾಹುಲ್ ಗಾಂಧಿ ಭೇಟಿ ಮಾಡಲು ಇಚ್ಚಿಸಿದ 107 ರ ಅಜ್ಜಿ
ನವದೆಹಲಿ: ಇತ್ತೀಚಿಗೆ ರಾಹುಲ್ ಗಾಂಧಿ ಗುಜರಾತ್ ಚುನಾವಣೆ ಮುಗಿದ ನಂತರ ಅವರ ರಾಜಕೀಯ ಚಹರೆಯು ಬದಲಾಗಿ ಬಿಟ್ಟಿದೆ. ಸಣ್ಣ ಪುಟ್ಟ ಪಕ್ಷಗಳಿಂದ ಹಿಡಿದು ಪಕ್ಷಾತೀತವಾಗಿ ಎಲ್ಲರು ರಾಹುಲ್ ರವರನ್ನು ಹೊಗಳುತ್ತಿದ್ದಾರೆ. ಆದರೆ ಈ ಸಾಲಿಗೆ ಒಬ್ಬ ವಿಶಿಷ್ಟ ವ್ಯಕ್ತಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಅವರ್ಯಾರೆಂದರೆ 107 ವಯಸ್ಸಿನ ಅಜ್ಜಿಯೊಬ್ಬರು ರಾಹುಲ್ ಗಾಂಧಿಯನ್ನು ಭೇಟಿ ಮಾಡಬೇಕಂತೆ, ಆದರೆ ಈ ಭೇಟಿಗೆ ಅವರು ನೀಡಿರುವ ಕಾರಣವೇನೆಂದರೆ ಅವರು ಸ್ಪೂರದ್ರೂಪಿ ಎನ್ನುವುದು. ..!
ಹೌದು, ಇದು ಆಶ್ಚರ್ಯವಾದರು ಸತ್ಯ. ಬೆಂಗಳೂರು ಮೂಲದ ದಿಪಾಲಿ ಸಿಕಂದ ಎನ್ನುವ ಮಹಿಳೆಯೊಬ್ಬರು ತನ್ನ ಅಜ್ಜಿ 107 ನೇ ವಯಸ್ಸಿಗೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು ತಮ್ಮ ಅಜ್ಜಿಯು ರಾಹುಲ್ ಗಾಂಧಿ ಸೌಂದರ್ಯಕ್ಕೆ ಮಾರುಹೋಗಿ ಅವನನ್ನು ಭೇಟಿ ಮಾಡಲು ಇಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
"ಇಂದು ನನ್ನ ಅಜ್ಜಿ 107ನೇ ವಯಸ್ಸಿಗೆ ಪಾದಾರ್ಪಣೆ ಮಾಡುತ್ತಿದ್ದು,ಈ ಸಂದರ್ಭದಲ್ಲಿ ಅವರು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಇಚ್ಚಿಸಿದ್ದಾರೆ! ನಾನು ಯಾಕೆ ಎಂದು ಕೇಳಿದಾಗ? ಅವರು ಪಿಸುನುಡಿದು ಸ್ಪುರದ್ರೂಪಿ ಎಂದರು".ಎಂದು ದೀಪಾಲಿ ತಮ್ಮ ಅಜ್ಜಿ ಕೇಕ್ ಕತ್ತರಿಸುತ್ತಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಪ್ರೀತಿಯ ದೀಪಾಲಿ ,ನಿಮ್ಮ ಅಜ್ಜಿಗೆ ಹುಟ್ಟುಹಬ್ಬದ ಮತ್ತು ಕ್ರಿಸ್ ಮಸ್ ನ ಶುಭಾಶಯಗಳು. ನನ್ನ ಕಡೆಯಿಂದ ನಿಮ್ಮ ಅಜ್ಜಿಗೆ ನನ್ನ ಅಪ್ಪುಗೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿ ವ್ಯಯಕ್ತಿಕವಾಗಿ ನನ್ನ ನಾಣಿಗೆ ಕರೆ ಮಾಡಿ ಹುಟ್ಟುಹಬ್ಬಕ್ಕೆ ಹಾರೈಸಿದ್ದಾರೆ ಎಂದು ದೀಪಾಲಿ ತಿಳಿಸಿದ್ದಾರೆ.