Ayodhya RamMandir 10KG ಚಿನ್ನ, 25KG ಬೆಳ್ಳಿ... ಬಾಲರಾಮನಿಗೆ ಭಕ್ತರಿಂದ ಹರಿದುಬಂದ ಕಾಣಿಕೆ ಎಷ್ಟು..?
ರಾಮಮಂದಿರ ದೇಣಿಗೆ ಸಂಗ್ರಹ: ಒಂದು ತಿಂಗಳ ಅವಧಿಯಲ್ಲಿ 60 ಲಕ್ಷಕ್ಕೂ ಹೆಚ್ಚು ಭಕ್ತರು ಬಾಲರಾಮನ ದರ್ಶನ ಪಡೆದು 25 ಕೋಟಿ ರೂ.ಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಈ ವೇಳೆ ಭಕ್ತರು 25 ಕೆಜಿ ಬೆಳ್ಳಿ ಮತ್ತು 10 ಕೆಜಿ ಚಿನ್ನವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
Ram Mandir Donation: ಅಯೋಧ್ಯೆಯ ಗರ್ಭಗುಡಿಯಲ್ಲಿ ಬಾಲರಾಮ ಆಸೀನರಾಗಿ ಒಂದು ತಿಂಗಳಾಗಿದೆ. ಸುದೀರ್ಘ ಕಾಯುವಿಕೆಯ ನಂತರ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು. ಮೊದಲ ದಿನ ಅಂದರೆ ಜ.22ರಂದು ರಾಮಮಂದಿರ ಟ್ರಸ್ಟ್‌ನಿಂದ ಪ್ರಾಣ-ಪ್ರತಿಷ್ಠಾ ಕಾರ್ಯಕ್ರಮದ ಆಹ್ವಾನವನ್ನು ಯಾರಿಗೆ ಕಳುಹಿಸಲಾಗಿದೆಯೋ ಅಂತಹ ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶವಿತ್ತು.
ಜ.23ರಿಂದ ಎಲ್ಲರಿಗೂ ಶ್ರೀರಾಮನ ದರ್ಶನಕ್ಕೆ ಬಾಗಿಲು ತೆರೆಯಲಾಯಿತು. ಅಂದಿನಿಂದ ರಾಮನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಸಾಲುಗಟ್ಟಿ ಬರುತ್ತಿದ್ದಾರೆ. ಜ.23ರಂದು ಸುಮಾರು 5 ಲಕ್ಷ ಭಕ್ತರು ದರ್ಶನ ಪಡೆದರು. ಜನ ಸಾಮಾನ್ಯರಿಗೆ ದರ್ಶನ ಆರಂಭವಾಗಿ 1 ತಿಂಗಳು ಕಳೆದಿದೆ. ಈ ಒಂದೇ ತಿಂಗಳಿನಲ್ಲಿ ಬಾಲರಾಮನಿಗೆ ಭಕ್ತರಿ ಚಿನ್ನ-ಬೆಳ್ಳಿ ಸೇರಿದಂತೆ ಲಕ್ಷ ಲಕ್ಷ ಕಾಣಿಕೆಯನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ: ವರ್ಷದಲ್ಲಿ ಕೇರಳಕ್ಕೆ ಮೂರನೇ ಭೇಟಿ : ಫೆ.27ರಂದು ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ
ಅಂಬಾನಿ ಕುಟುಂಬದ ದೇಣಿಗೆ 10 ಕೋಟಿ ರೂ.
ಈ 1 ತಿಂಗಳಲ್ಲಿ ಬಾಲರಾಮನ ಮಂದಿರಕ್ಕೆ ಆಗಮಿಸಿದ ಭಕ್ತರು ಭಕ್ತಿಯಿಂದ ಕಾಣಿಕೆಯನ್ನು ಅರ್ಪಿಸಿದ್ದಾರೆ. ಯಾವ್ಯಾವ ರೀತಿಯ ಕಾಣಿಕೆಯನ್ನು ಅರ್ಪಿಸಿದ್ದಾರೆಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇರಬಹುದು. ಮೊದಲ ದಿನವೇ ಅಂಬಾನಿ ಕುಟುಂಬವು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 2.51 ಕೋಟಿ ರೂ. ಸೇರಿದಂತೆ ರಾಮಮಂದಿರಕ್ಕೆ ಒಟ್ಟು 10 ಕೋಟಿ ರೂ.ಗೂ ಹೆಚ್ಚು ದೇಣಿಗೆ ನೀಡಿದೆ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ. ಇದಲ್ಲದೇ ರಾಮನ ಮಂದಿರಕ್ಕೆ ಅನೇಕ ಕೋಟ್ಯಾಧಿಪತಿಗಳು ಕೋಟಿ ಕೋಟಿ ದೇಣಿಗೆ ನೀಡಿದ್ದಾರೆ.
ಒಂದೇ ಎಷ್ಟು ದೇಣಿಗೆ ಸಂಗ್ರಹವಾಗಿದೆ?
1 ತಿಂಗಳ ಅವಧಿಯಲ್ಲಿ 60 ಲಕ್ಷಕ್ಕೂ ಅಧಿಕ ಭಕ್ತರು ರಾಮಮಂದಿರಕ್ಕೆ ಭೇಟಿ ನೀಡಿದ್ದು, ಒಟ್ಟು 25 ಕೋಟಿ ರೂ.ಗೂ ಹೆಚ್ಚು ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಆವರಣದಲ್ಲಿ ಅಳವಡಿಸಿರುವ ಕಾಣಿಕೆ ಪೆಟ್ಟಿಗೆ ಹಾಗೂ ಕಾಣಿಕೆ ಕೌಂಟರ್‌ನಲ್ಲಿ ಈ ದೇಣಿಗೆಯನ್ನು ಸ್ವೀಕರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಚೇರಿ ನೀಡಿದ ಮಾಹಿತಿಯ ಪ್ರಕಾರ, ರಾಮ ಭಕ್ತರು ಈ ಮೊತ್ತವನ್ನು ನಗದು, ಚೆಕ್ ಮತ್ತು ಡ್ರಾಫ್ಟ್ ಮೂಲಕ ರಾಮಮಂದಿರಕ್ಕೆ ನೀಡಿದ್ದಾರೆ. ಬೇರೆ ದೇಶಗಳಿಂದ ಬರುವ ರಾಮಭಕ್ತರು ನೀಡುವ ದೇಣಿಗೆ ಈ ಲೆಕ್ಕಾಚಾರದಲ್ಲಿ ಸೇರಿಲ್ಲ. ಇದಲ್ಲದೆ ರಾಮ ಭಕ್ತರು ಚಿನ್ನ, ಬೆಳ್ಳಿ ಮತ್ತು ರತ್ನಗಳನ್ನು ಸಹ ದಾನ ಮಾಡಿದ್ದಾರೆ.
ಚಿನ್ನ-ಬೆಳ್ಳಿ ದೇಣಿಗೆ
ಶ್ರೀರಾಮನ ಭಕ್ತರು ಸಾಕಷ್ಟು ಚಿನ್ನ, ಬೆಳ್ಳಿಯನ್ನು ಸಹ ದಾನ ಮಾಡಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಈ 1 ತಿಂಗಳಲ್ಲಿ 25 ಕೆಜಿ ಬೆಳ್ಳಿ ಮತ್ತು 10 ಕೆಜಿ ಚಿನ್ನವು ಕಾಣಿಕೆಯಾಗಿ ಬಂದಿದೆ. ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಕಿರೀಟ, ಹಾರ, ಛತ್ರಿ, ರಥ, ಬಳೆಗಳು ಮತ್ತು ಕಾಲುಂಗುರಗಳು ಇತ್ಯಾದಿಗಳನ್ನು ಒಳಗೊಂಡಿದೆ. ಇದಲ್ಲದೆ ಇತರ ವಸ್ತುಗಳಾದ ಆಟಿಕೆಗಳು, ದೀಪಗಳು, ಧೂಪದ್ರವ್ಯದ ಸ್ಟ್ಯಾಂಡ್, ಬಿಲ್ಲು ಮತ್ತು ಬಾಣ ಇತ್ಯಾದಿಗಳನ್ನು ಸಹ ಬಂದಿವೆ. ರಾಮಮಂದಿರಕ್ಕೆ ಭಕ್ತರು ಚಿನ್ನ ಮತ್ತು ಬೆಳ್ಳಿ ಪಾತ್ರೆಗಳನ್ನು ಸಹ ನೀಡಿದ್ದಾರೆ. ಚಿನ್ನ-ಬೆಳ್ಳಿಯಲ್ಲದೆ ರತ್ನಗಳನ್ನೂ ಸಹ ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ.
ದರ್ಶನದ ಸಮಯ
1 ತಿಂಗಳ ಅವಧಿಯಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀರಾಮನ ದರ್ಶನ ಪಡೆದಿದ್ದಾರೆ. ಜನವರಿ 22ರ ನಂತರ ಪ್ರಾರಂಭವಾದ ದರ್ಶನದಿಂದ ಫೆಬ್ರವರಿ 22ರವರೆಗೆ ಈ ಅಂಕಿ ಅಂಶವನ್ನು ವರದಿ ಮಾಡಲಾಗಿದೆ. ಭಕ್ತರ ದಟ್ಟಣೆ ಹೆಚ್ಚಿರುವುದರಿಂದ ದರ್ಶನದ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ಭಕ್ತರು ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯವರೆಗೆ ದೇವರ ದರ್ಶನ ಪಡೆಯಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಮುಂದಿನ ನಿರ್ಧಾರ ಫೆಬ್ರವರಿ 29 ರಂದು ಪ್ರಕಟ : ಅಲ್ಲಿಯವರೆಗೂ 'ದಿಲ್ಲಿ ಚಲೋ' ಹೋರಾಟ ಸ್ಥಗಿತ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.