ಉತ್ತರ ಪ್ರದೇಶದಿಂದ ಆಘಾತಕಾರಿ ಸುದ್ದಿಯೊಂದು ಬಹಿರಂಗಗೊಂದಿದ್ದ್ತು ಘಟನೆಯಲ್ಲಿ ಆನ್ಲೈನ್ ತರಗತಿ ನಡೆಯುತ್ತಿದ್ದ ವೇಳೆ 10ನೇ ತರಗತಿಯಲ್ಲಿ ವಿದ್ಯಾರ್ಥಿನಿಯರು ಟೀಚರ್ ವಿರುದ್ಧ ಅಸಭ್ಯ ಭಾಷೆಯನ್ನು ಪ್ರಯೋಗಿಸಿ ಜೊತೆಗೆ ಅಶ್ಲೀಲ ಮೆಸೇಜ್ ಹಾಗೂ ಪಾರ್ನ್ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ. ಆಜಂಗಡ್ ನಲ್ಲಿರುವ ಒಂದು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರಲ್ಲಿ ಈ ವಿದ್ಯಾರ್ಥಿನಿಯರು ಓದುತ್ತಾರೆ. ಆನ್ಲೈನ್ ತರಗತಿಗೆ ಅನುಪಸ್ಥಿತರಾದ ಇಬ್ಬರು ವಿದ್ಯಾರ್ಥಿನಿಯರ ಪರಿಚಯ ನೀಡಿ ಈ ವಿದ್ಯಾರ್ಥಿನಿಯರು 12ನೇ ತರಗತಿಯ ಆನ್ಲೈನ್ ಕ್ಲಾಸ್ ಗೆ ಹಾಜರಾಗಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಘಟನೆಯ ಕುರಿತು ಮಾಹಿತಿ ನೀಡಿರುವ ಆಜಂಗಡ್ ಪೋಲೀಸ್ ಅಧಿಕಾರಿ ತ್ರಿವೇಣಿ ಸಿಂಗ್, " ನಗರದ ಒಂದು ಖಾಸಗಿ ಶಾಲೆಯ ಪ್ರಾಂಶುಪಾಲರು ಹಾಗೂ ಟೀಚರ್ ಶುಕ್ರವಾರ ಪೋಲೀಸ್ ಠಾಣೆಗೆ ಬಂದು ಪ್ರಕರಣವೊಂದನ್ನು ದಾಖಲಿಸಿದ್ದು, ಈ ಪ್ರಕರಣದಲ್ಲಿ ಶಿಕ್ಷಕಿ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಾಟ್ಸ್ ಆಪ್ ಮೂಲಕ ಇಂಗ್ಲಿಷ್ ಕ್ಲಾಸ್ ತೆತೆಗೆದುಕೊಳ್ಳುತ್ತಿದ್ದ ವೇಳೆ ಇಬ್ಬರು ವಿದ್ಯಾರ್ಥಿನಿಯರು ಶಿಕ್ಷಕಿಗೆ ವೈಯಕ್ತಿಕ ಸಂದೇಶ ಕಳುಹಿಸಿ ಗ್ರೂಪ್ ನಲ್ಲಿ ಸೇರಿಸಲು ಕೇಳಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.


ಶಿಕ್ಷಕಿ ತನ್ನ ದೂರಿನಲ್ಲಿ, "ಅವರಿಗೆ ಸಹಾಯ ಮಾಡಿದಾಗ, ಅವರಲ್ಲಿ ಓರ್ವ ವಿದ್ಯಾರ್ಥಿನಿ ನನಗೆ ಅಸಭ್ಯ ಸಂದೇಶ ಕಳುಹಿಸಿದರೆ ಇನ್ನೊಬ್ಬ ವಿದ್ಯಾರ್ಥಿನಿ ಅಶ್ಲೀಲ ಕ್ಲಿಪ್ ಕಳುಹಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಬಳಿಕ ಇಬ್ಬರೂ ಒಟ್ಟಿಗೆ ಸೇರಿ ಅಶ್ಲೀಲ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ಇದನ್ನು ಖಂಡಿಸಿ ತಾವು ತಕ್ಷಣವೇ ಗುಂಪಿನ ಕುರಿತು ಪ್ರಾಂಶುಪಾಲರಿಗೆ ತಕ್ಷಣ ಮಾಹಿತಿ ನೀಡಿರುವುದಾಗಿ ಶಿಕ್ಷಕಿ ಹೇಳಿದ್ದಾರೆ.


ಬಳಿಕ ಘಟನೆಯ ಕುರಿತು ಮಾಹಿತಿ ನೀಡಿರುವ ಆಡಳಿತ ಮಂಡಳಿ, ಇಬ್ಬರೂ ವಿದ್ಯಾರ್ಥಿನಿಯರ ಪೋಷಕರನ್ನು ಶಾಲೆಗೇ ಕರೆಯಿಸಿ ವಿಚಾರಣೆ ನಡೆಸಲಾಗಿದ್ದು, ವಿದ್ಯಾರ್ಥಿನಿಯರು ಕಳೆದ 15 ದಿನಗಳಿಂದ ನಗರದಲ್ಲಿಯೇ ಇಲ್ಲ ಹಾಗೂ ಅವರ ಬಳಿ ಮೊಬೈಲ್ ಕೂಡ ಇಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.


ತನಿಖೆಯ ಬಳಿಕ ಮಾಹಿತಿ ನೀಡಿರುವ SP, "ಸದ್ಯ ಸರ್ವೆಲೆನ್ಸ್ ಸಹಾಯದಿಂದ 10 ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳ ಲೋಕೇಶನ್ ಪತ್ತೆ ಹಚ್ಚಲಾಗಿದ್ದು, ಇಬ್ಬರೂ ಕೂಡ ಅದೇ ಶಾಲೆಯ ವಿದ್ಯಾರ್ಥಿಗಲಾಗಿದ್ದಾರೆ ಎನ್ನಲಾಗಿದೆ.


ಸದ್ಯ ಇಬ್ಬರೂ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಅವರನ್ನು ಬಾಲ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.