ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳಿರುವ ಕಾರಣ ಹಬ್ಬದ ಕಾರಣ ಬ್ಯಾಂಕುಗಳು ಕೇವಲ 20 ದಿನಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಹಾಗಾಗಿ ಗ್ರಾಹಕರು ತಮ್ಮ ಯಾವುದೇ ಹಣಕಾಸಿನ ವ್ಯವಹಾರಗಳಿದ್ದರೆ ಮೊದಲೇ ಪ್ಲಾನ್ ಮಾಡಿ ನಿರ್ವಹಿಸಿದರೆ ಉತ್ತಮ. 


COMMERCIAL BREAK
SCROLL TO CONTINUE READING

ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಒಟ್ಟು 11 ದಿನಗಳ ರಜೆ ಇದ್ದು, ಈಗಾಗಲೇ ಗಾಂಧೀ ಜಯಂತಿ ರಜೆ ಮುಗಿದಿದೆ. ಇದಾದ ಬಳಿಕ ದಸರಾ ಮತ್ತು ದೀಪಾವಳಿ ಹಬ್ಬಗಳಿಗಾಗಿ ಸಾಲು ಸಾಲು ರಜೆಗಳಿರುವುದರಿಂದ ಅಂದು ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. 


ಅಕ್ಟೋಬರ್ 7 ಮತ್ತು 8 ರಂದು ರಾಮನವಮಿ ಮತ್ತು ದಸರಾ ಕಾರಣ ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆಯಿರುತ್ತದೆ. ಅಲ್ಲದೆ, ಅಕ್ಟೋಬರ್ 6 ರ ಭಾನುವಾರ. ಅಂದರೆ, ಅಕ್ಟೋಬರ್ ಎರಡನೇ ವಾರದಲ್ಲಿ, ಬ್ಯಾಂಕುಗಳು ಸತತ 3 ದಿನಗಳವರೆಗೆ ಮುಚ್ಚಲ್ಪಡುತ್ತವೆ.


ಅಕ್ಟೋಬರ್ 12 ಎರಡನೇ ಶನಿವಾರ, ಅಕ್ಟೋಬರ್ 13 ಭಾನುವಾರ, ಅಕ್ಟೋಬರ್ 20 ಭಾನುವಾರ, ಅಕ್ಟೊಬರ್ 26, 27 ನಾಲ್ಕನೇ ಶನಿವಾರ ಹಾಗೂ ಭಾನುವಾರ ಇದೆ. ಕೆಲವು ರಾಜ್ಯಗಳಲ್ಲಿ ಗೋವರ್ದನ ಪೂಜೆಗೆಂದು ಅಕ್ಟೋಬರ್ 28ಕ್ಕೆ ರಜೆ, ಅಕ್ಟೋಬರ್ 29 ರಂದು ಬಲಿಪಾಡ್ಯಮಿ ರಜೆ ಇರಲಿದೆ.