ಜೋಧ್‌ಪುರ: ಜಿಲ್ಲೆಯ ಶೆರ್‌ಗಢ ಪೊಲೀಸ್ ಠಾಣೆ ಪ್ರದೇಶದ ಸೊಯಿಂಟ್ರಾ ಗ್ರಾಮದ ಹೊರವಲಯದಲ್ಲಿನ ಬಲೋಟ್ರಾ ಹೆದ್ದಾರಿಯಲ್ಲಿ ಭಾರೀ ರಸ್ತೆ ಅವಘಡ ಸಂಭವಿಸಿದ್ದು, 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮೂರು ಜನರು ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಗಾಯಾಳುಗಳನ್ನು ಆಂಬ್ಯುಲೆನ್ಸ್ ಸಹಾಯದಿಂದ ಶೆರ್ಗಢ ಆಸ್ಪತ್ರೆಗೆ ಕರೆತರಲಾಗಿದೆ. ಮಾಹಿತಿಯ ಪ್ರಕಾರ, ಶೆರ್ಗಢ ಪೊಲೀಸ್ ಠಾಣೆ ಸ್ಥಳಕ್ಕೆ ತಲುಪಿ ಕ್ರೇನ್ ಸಹಾಯದಿಂದ ವಾಹನದಲ್ಲಿ ಸಿಲುಕಿದ್ದ ಮೃತ ದೇಹಗಳನ್ನು ಹೊರತೆಗೆಯುತ್ತಿದ್ದಾರೆ.


ಜೋಧಪುರ ಸೊಯಿಂತ್ರಾದಲ್ಲಿ ಅಪಘಾತದ ಮಾಹಿತಿ ದೊರೆತ ಕೂಡಲೇ ಜಿಲ್ಲಾಧಿಕಾರಿ ಪ್ರಕಾಶ್ ರಾಜ್‌ಪುರೋಹಿತ್ ಮತ್ತು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಬಾರ್ತ್ ಸ್ಥಳಕ್ಕೆ ತೆರಳಿದ್ದಾರೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಸತ್ತವರಲ್ಲಿ 4 ಪುರುಷರು, 6 ಮಹಿಳೆಯರು ಮತ್ತು 1 ಮಗು ಸೇರಿದೆ.


ಇಂದು ಬೆಳಿಗ್ಗೆ ನಡೆದ ಈ ಘಟನೆಯ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಗೆಹ್ಲೋಟ್ ಅಪಘಾತದ ಬಗ್ಗೆ ಮಾಹಿತಿ ಪಡೆದಾಗ ತೀವ್ರ ದುಃಖವಾಯಿತು ಎಂದು ಬರೆದಿದ್ದಾರೆ. ಇದರಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರ ಸಂಬಂಧಿಕರಿಗೆ ಸಂತಾಪಗಳು. ಈ ದುಃಖವನ್ನು ಭರಿಸಲು ದೇವರು ಅವರಿಗೆ ಶಕ್ತಿಯನ್ನು ನೀಡಲಿ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದವರು ಬರೆದಿದ್ದಾರೆ.