ಅವ್ಯಾಚವಾಗಿ ಮಹಾರಾಷ್ಟ್ರದ ಸ್ಪೀಕರ್ ನಿಂದಿಸಿದ್ದಕ್ಕೆ 12 ಬಿಜೆಪಿ ಶಾಸಕರ ಅಮಾನತು
ಮಹಾರಾಷ್ಟ್ರ ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಸ್ಪೀಕರ್ ನ್ನು ನಿಂದಿಸಿದ ಹಿನ್ನಲೆಯಲ್ಲಿ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದವರೆಗೆ ಸದನವು ಅಮಾನತುಗೊಳಿಸಿದೆ.
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಸ್ಪೀಕರ್ ನ್ನು ನಿಂದಿಸಿದ ಹಿನ್ನಲೆಯಲ್ಲಿ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದವರೆಗೆ ಸದನವು ಅಮಾನತುಗೊಳಿಸಿದೆ.
ಇನ್ನೊಂದೆಡೆಗೆ ಈ ಆರೋಪಗಳನ್ನು ಪ್ರತಿಪಕ್ಷದ ನಾಯಕ ಫಡ್ನವೀಸ್ (Devendra Fadnavis) ಸುಳ್ಳು ಎಂದು ಹೇಳಿದ್ದಾರೆ. "ಇವು ಸುಳ್ಳು ಆರೋಪಗಳು. ಒಂದು ಕಥೆಯನ್ನು ರಚಿಸಲಾಗುತ್ತಿದೆ...ಬಿಜೆಪಿಯಿಂದ ಯಾರೂ ನಿಂದನೆ ಮಾಡಿಲ್ಲ' ಎಂದು ಮಾಧ್ಯಮಕ್ಕೆ ತಿಳಿಸಿದರು.'ಒಬಿಸಿ (ಇತರ ಹಿಂದುಳಿದ ಜಾತಿ) ಮೀಸಲಾತಿಗಾಗಿ, ನಾವು 12 ಕ್ಕೂ ಹೆಚ್ಚು ಶಾಸಕರನ್ನು ತ್ಯಾಗಮಾಡಲು ಸಿದ್ಧರಿದ್ದೇವೆ' ಎಂದು ಅವರು ಹೇಳಿದರು.
ಇದನ್ನೂ ಓದಿ: "ಶಿವಸೇನಾ ಪಕ್ಷವು ಎಂದಿಗೂ ನಮ್ಮ ಶತ್ರುವಲ್ಲ"- ದೇವೇಂದ್ರ ಫಡ್ನವೀಸ್
ಪ್ರತಿಪಕ್ಷಗಳು ಇಂದು ಒಬಿಸಿ ವಿಷಯದ ಬಗ್ಗೆ ಸದನದಲ್ಲಿ ಕೋಲಾಹಲ ಸೃಷ್ಟಿಸಿತ್ತು ಮತ್ತು ಸ್ಪೀಕರ್ ಇನ್ ಚೇರ್ ಭಾಸ್ಕರ್ ಜಾಧವ್ ಅವರಿಗೆ ಮಾತನಾಡಲು ಸಾಕಷ್ಟು ಸಮಯ ನೀಡಿಲ್ಲ ಎಂದು ಆರೋಪಿಸಿದ್ದರು. ಸದನವನ್ನು ಮುಂದೂಡಿದ ನಂತರ ವಿಷಯ ಉಲ್ಬಣಗೊಂಡಿತು.
ಪಿಎಂ ಮೋದಿ, ಫಡ್ನವಿಸ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್, 54 ಜನರ ಮೇಲೆ ಪ್ರಕರಣ ದಾಖಲು
12 ಶಾಸಕರನ್ನು ಒಂದು ವರ್ಷ ಅಮಾನತುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಲ್ಕರ್, ಪರಾಗ್ ಅಲವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುಟೆ, ವಿಜಯ್ ಕುಮಾರ್ ರಾವಲ್, ಯೋಗೇಶ್ ಸಾಗರ್, ನಾರಾಯಣ್ ಕುಚೆ, ಕೀರ್ತಿಕುಮಾರ್ ಬಾಂಗ್ಡಿಯಾ ಸೇರಿದ್ದಾರೆ.
ನಂತರ, ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖಂಡ ನವಾಬ್ ಮಲಿಕ್ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಇದು ಹೇಗೆ ಪ್ರಾರಂಭವಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ.'ಈ ಠಾಕ್ರೆ ಸರ್ಕಾರ ತಾಲಿಬಾನ್ ನಂತೆ ವರ್ತಿಸುತ್ತಿದೆ.ನಾನು ಈ ಕ್ರಮವನ್ನು ಖಂಡಿಸುತ್ತೇನೆ.ನಾನೂ ಅಥವಾ ಇತರ ಯಾವುದೇ ಶಾಸಕರು ಭಾಸ್ಕರ್ ಜಾಧವ್ ಅವರನ್ನು ನಿಂದಿಸಲಿಲ್ಲ' ಎಂದು ಬಿಜೆಪಿ ಶಾಸಕ ಆಶಿಶ್ ಶೆಲಾರ್ ಹೇಳಿದ್ದಾರೆ.
'ಯಾವುದೇ ಬಿಜೆಪಿ ಸದಸ್ಯರು ಕ್ಯಾಬಿನ್‌ನಲ್ಲಿ ನಿಂದನೆ ಬಳಸಲಿಲ್ಲ. ನಾನು ಅವರಿಗೆ ಕ್ಷಮೆಯಾಚಿಸಿದ್ದೇನೆ ಆದರೆ ಅದರ ಹೊರತಾಗಿಯೂ ಅವರು ಅಮಾನತುಗೊಳಿಸಿದ್ದಾರೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಚುನಾವಣಾ ಅಫಿಡವಿಟ್ ಪ್ರಕರಣ: ಸುಪ್ರೀಂಕೋರ್ಟ್ ನಲ್ಲಿ ದೇವೇಂದ್ರ ಫಡ್ನವೀಸ್ ಗೆ ಹಿನ್ನಡೆ
ಮಾಜಿ ಸ್ಪೀಕರ್ ನಾನಾ ಪಟೋಲ್ ರಾಜೀನಾಮೆ ನೀಡಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರಿಂದ ವಿಧಾನಸಭೆಯು ಹೊಸ ಸ್ಪೀಕರ್ ಅವರನ್ನು ಆಯ್ಕೆ ಮಾಡಬೇಕಾಗಿದೆ.ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸಂಖ್ಯೆಗಳನ್ನು ಹೊಂದಿದ್ದರೂ ಬಿಜೆಪಿ ಈ ಹುದ್ದೆಗೆ ತನ್ನದೇ ಅಭ್ಯರ್ಥಿಯನ್ನು ಬಯಸಿದೆ.
2019 ರ ನವೆಂಬರ್‌ನಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿದಾಗ ಅಧಿಕಾರ ಹಂಚಿಕೆ ವ್ಯವಸ್ಥೆಯಲ್ಲಿ ಕಾಂಗ್ರೆಸ್‌ಗೆ ಸ್ಪೀಕರ್ ಹುದ್ದೆ ನೀಡಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.