12 ಓಮಿಕ್ರಾನ್ ಶಂಕಿತರು ದೆಹಲಿಯ ಆಸ್ಪತ್ರೆಗೆ ದಾಖಲು
ಕೋವಿಡ್-19 `ಓಮಿಕ್ರಾನ್ ರೂಪಾಂತರ ಸೋಂಕಿಗೆ ಒಳಗಾಗಿರುವ ಶಂಕಿತ 12 ರೋಗಿಗಳನ್ನು ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ಇಲ್ಲಿಯವರೆಗೆ ದಾಖಲಿಸಲಾಗಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ.
ನವದೆಹಲಿ: ಕೋವಿಡ್-19 `ಓಮಿಕ್ರಾನ್ ರೂಪಾಂತರ ಸೋಂಕಿಗೆ ಒಳಗಾಗಿರುವ ಶಂಕಿತ 12 ರೋಗಿಗಳನ್ನು ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ಇಲ್ಲಿಯವರೆಗೆ ದಾಖಲಿಸಲಾಗಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಎಂಟು ಓಮಿಕ್ರಾನ್ (Omicron) ಶಂಕಿತರನ್ನು ನಿನ್ನೆ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ."ನಾಲ್ವರು ಶಂಕಿತರನ್ನು ಇಂದು ದಾಖಲಿಸಲಾಗಿದೆ, ಅದರಲ್ಲಿ ಇಬ್ಬರಿಗೆ ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟಿದ್ದು, ಉಳಿದ ಇಬ್ಬರ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ" ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆಯೇ ಇಮ್ರಾನ್ ಖಾನ್ ಬಗ್ಗೆ ಸಿಧು ನೀಡಿದ ಹೇಳಿಕೆ?
ಈ ನಾಲ್ವರು ಶಂಕಿತರಲ್ಲಿ ಇಬ್ಬರು ಯುಕೆಯಿಂದ ಬಂದವರು, ಒಬ್ಬರು ಫ್ರಾನ್ಸ್‌ನಿಂದ ಮತ್ತು ಒಬ್ಬರು ನೆದರ್‌ಲ್ಯಾಂಡ್‌ನಿಂದ ಬಂದವರು ಎಂದು ಮೂಲಗಳು ತಿಳಿಸಿವೆ.ಇದಲ್ಲದೆ, ಎಲ್ಲಾ ನಾಲ್ಕು ರೋಗಿಗಳ ಮಾದರಿಗಳನ್ನು ಇಂದು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.
ಮೊನ್ನೆ ಗುರುವಾರ, ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕದಲ್ಲಿ ಹೆಚ್ಚು ಅಪಾಯಕಾರಿ ಕೊರೊನಾವೈರಸ್ ಸ್ಟ್ರೈನ್‌ನ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿತ್ತು. "ಇಬ್ಬರಿಗೆ COVID-19 ನ ಓಮಿಕ್ರಾನ್ ರೂಪಾಂತರ ತಗುಲಿದೆ, ಅವರಲ್ಲಿ ಒಬ್ಬರು ವ್ಯಕ್ತಿ ಸುಮಾರು 66 ವರ್ಷ ವಯಸ್ಸಿನವನಾಗಿದ್ದಾರೆ. ಇನ್ನೊಬ್ಬ ವ್ಯಕ್ತಿ 46 ವರ್ಷ ವಯಸ್ಸಿನ ವೈದ್ಯರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇದನ್ನೂ ಓದಿ : ಕೋಳಿಯನ್ನು ದುರ್ಬಲ ಎಂದುಕೊಂಡು ಜಗಳಕ್ಕೆ ನಿಂತ ಬೆಕ್ಕು, ಆದರೆ ಆಗಿದ್ದೇನು ? ಫೈಟಿಂಗ್ ನ full video ಇಲ್ಲಿದೆ
COVID-19 ನ ಹೊಸ ರೂಪಾಂತರವು ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಿಂದ ಮೊದಲ ಬಾರಿಗೆ ವರದಿಯಾಗಿದೆ.ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಈ ವರ್ಷದ ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ B.1.1.529 ಸೋಂಕು ಮೊದಲ ಬಾರಿಗೆ ದೃಢಪಟ್ಟಿದೆ.
ನವೆಂಬರ್ 26 ರಂದು, ವಿಶ್ವ ಆರೋಗ್ಯ ಸಂಸ್ಥೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ರೂಪಾಂತರವನ್ನು `ಓಮಿಕ್ರಾನ್~ ಎಂದು ಹೆಸರಿಸಿತು.ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್ ಅನ್ನು `ಕಳವಳಿಕೆಯ ರೂಪಾಂತರ' ಎಂದು ವರ್ಗೀಕರಿಸಿದೆ.ರೂಪಾಂತರವು ಪತ್ತೆಯಾದಾಗಿನಿಂದ ಹತ್ತಾರು ದೇಶಗಳು ದಕ್ಷಿಣ ಆಫ್ರಿಕಾದ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಿವೆ.
ಹೊಸ ಓಮಿಕ್ರಾನ್ ಕರೋನವೈರಸ್ ರೂಪಾಂತರವು 23 ದೇಶಗಳಲ್ಲಿ ದೃಢೀಕರಿಸಲ್ಪಟ್ಟಿದೆ ಮತ್ತು ಅವರ ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಇದನ್ನೂ ಓದಿ : Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ