ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 2019ರ ಜೂನ್ ವರೆಗೆ ಒಟ್ಟು 126 ಭಯೋತ್ಪಾದಕರನ್ನು ಭದ್ರತೆ ಮತ್ತು ರಕ್ಷಣಾ ಸಿಬ್ಬಂದಿ ಹತ್ಯೆಗೈದಿದ್ದಾರೆ ಎಂದು ಗೃಹ ಸಚಿವಾಲಯ ಬುಧವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಕಳೆದ ಮೂರೂವರೆ ವರ್ಷಗಳಲ್ಲಿ 27 ಆರೋಪಿ ಭಯೋತ್ಪಾದಕರನ್ನು ಕೇಂದ್ರವು ಗಡೀಪಾರು ಮಾಡಿರುವುದಾಗಿ ಹೇಳಿದೆ.


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಭಯೋತ್ಪಾದನೆ ವಿರುದ್ಧ ಸಹಿಷ್ಣು ನೀತಿಯನ್ನು ಅನುಸರಿಸಿ, ಭಯೋತ್ಪಾದಕರನ್ನು ತಟಸ್ಥಗೊಳಿಸಲು ಸೇನಾ ಪಡೆಗಳು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಗೃಹ ಸಚಿವಾಲಯ ಹೇಳಿದೆ.


2019ರಲ್ಲಿ ಇಲ್ಲಿಯವರೆಗೆ ಅಂತರರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆ ಮೂಲಕ 16 ಭಯೋತ್ಪಾದಕರನ್ನು ಯಶಸ್ವಿಯಾಗಿ ಬಂಧಿಸಲಾಗಿದೆ. 2018 ರಲ್ಲಿ ಜಾಗತಿಕ ಪೊಲೀಸ್ ಸಂಘಟನೆಯ ಮೂಲಕ 24 ಮಂದಿಯನ್ನು, 2017ರಲ್ಲಿ 35 ಮತ್ತು 2016 ರಲ್ಲಿ 36 ಮಂದಿಯನ್ನು ಬಂಧಿಸಲಾಗಿದೆ.


ಅಂತಾರಾಷ್ಟ್ರೀಯ ಬಂಧನಕ್ಕಾಗಿ 2019ರಲ್ಲಿ ಇಂಟರ್‌ಪೋಲ್‌ಗೆ ಭಾರತವು 41 ರೆಡ್ ಕಾರ್ನರ್ ನೋಟಿಸ್ ಕಳುಹಿಸಿದೆ. ಅದರಲ್ಲಿ 32ನ್ನು ಪ್ರಕಟಿಸಲಾಗಿದೆ. 2016ರಲ್ಲಿ ಸಿಬಿಐ 91 ನೋಟಿಸ್ ಕಳುಹಿಸಿದ್ದು, ಅದರಲ್ಲಿ 87ನ್ನು ಪ್ರಕಟಿಸಲಾಗಿದೆ. 2017 ರಲ್ಲಿ 94 ನೋಟಿಸ್‌ಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ 87ನ್ನು, 2018 ರಲ್ಲಿ 123 ನೋಟಿಸ್‌ಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಕೇವಲ 76 ನೋಟಿಸ್‌ಗಳನ್ನು ಪ್ರಕಟಿಸಲಾಗಿದೆ.


2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 963 ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದ್ದು, ಲೋಕಸಭೆಯಲ್ಲಿ ಮಂಗಳವಾರ ಲಿಖಿತ ಉತ್ತರದಲ್ಲಿ ಗೃಹ ಸಚಿವಾಲಯ ಈ ಡೇಟಾವನ್ನು ನೀಡಿದೆ.


ಜಮ್ಮು ಮತ್ತು ಕಾಶ್ಮೀರವು 2018 ರಲ್ಲಿ ಒಟ್ಟು 318 ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿದೆ ಎಂದು ಸೋಮವಾರ ರಾಜ್ಯ ರಕ್ಷಣಾ ಸಚಿವ ಶ್ರೀಪಾಡ್ ನಾಯಕ್ ರಾಜ್ಯಸಭೆಗೆ ಮಾಹಿತಿ ನೀಡಿದ್ದರು. ಇದು 2017 ರಲ್ಲಿ ನಡೆದ ದಾಳಿಯ ಸಂಖ್ಯೆಗಿಂತ 187 ಹೆಚ್ಚಾಗಿದೆ.


ಪುಲ್ವಾಮಾದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆ ಮೇಲೆ ಫೆಬ್ರವರಿ 14 ರಂದು ನಡೆದ ಭಯೋತ್ಪಾದಕ ದಾಳಿ ಸೇರಿದಂತೆ 2019 ರಲ್ಲಿ ಭಾರತ ಹಲವಾರು ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿದೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಿಂದಾಗಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.