ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ 13 ಮಂದಿ ವಿರುದ್ಧ ದೂರು ದಾಖಲು
ನಗರದ ನೌರಂಗಬಾದ್ ಪ್ರದೇಶದ ಮನೆಯೊಂದರಲ್ಲಿ ಹಿಂದೂ ಸಭಾ ನಾಯಕರು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಗಾಂಧೀಜಿ ವಿರುದ್ಧ ಪ್ರತಿಭಟಿಸಿದ್ದರು
ಲಕ್ನೋ: ಹುತಾತ್ಮರ ದಿನದಂದು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಪ್ರತಿಭಟಿಸಿದ ಹಿಂದೂ ಮಹಾಸಭಾ ನಾಯಕಿ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರ 71ನೇ ಪುಣ್ಯ ಸ್ಮರಣೆ ದಿನವಾದ ಜನವರಿ 30ರಂದು ನಗರದ ನೌರಂಗಬಾದ್ ಪ್ರದೇಶದ ಮನೆಯೊಂದರಲ್ಲಿ ಹಿಂದೂ ಸಭಾ ನಾಯಕರು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಗಾಂಧೀಜಿ ವಿರುದ್ಧ ಪ್ರತಿಭಟಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ 13 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಲಿಘರ್ ನ ಹಿರಿಯ ಪೋಲಿಸ್ ಅಧೀಕ್ಷಕ ಅಕ್ಷಯ್ ಕುಲ್ಹರೆ ಪಿಟಿಐಗೆ ತಿಳಿಸಿದ್ದಾರೆ.
ಸದ್ಯ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.