ನವದೆಹಲಿ: ದೆಹಲಿಯಲ್ಲಿನ 14 ಖಾಸಗಿ ಆಸ್ಪತ್ರೆಗಳನ್ನು ಪೂರ್ಣ COVID-19 ಆಸ್ಪತ್ರೆಗಳನ್ನಾಗಿ ಮಾಡಲಾಗಿದೆ.ಇಂದು ಕರೋನವೈರಸ್ ಸೋಂಕಿತ ರೋಗಿಗಳನ್ನು ಹೊರತುಪಡಿಸಿ ಇತರ ರೋಗಿಗಳನ್ನು ಪ್ರವೇಶಿಸದಂತೆ ದೆಹಲಿ ಸರ್ಕಾರ ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Public Provident Fund: ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ, 26 ಲಕ್ಷ ರೂ. ಗಳಿಸಿ


ಹತ್ತೊಂಬತ್ತು ಖಾಸಗಿ ಆಸ್ಪತ್ರೆಗಳು ತಮ್ಮ ತೀವ್ರ ನಿಗಾ ಘಟಕದ (ಐಸಿಯು) ಹಾಸಿಗೆಗಳಲ್ಲಿ ಕನಿಷ್ಠ ಶೇ 80  ರಷ್ಟು ಕೋವಿಡ್ ಚಿಕಿತ್ಸೆಗಾಗಿ ಕಾಯ್ದಿರಿಸಲು ನಿರ್ದೇಶಿಸಲಾಗಿದೆ.


ಎಂಭತ್ತೆರಡು ಖಾಸಗಿ ಆಸ್ಪತ್ರೆಗಳು ತಮ್ಮ ಐಸಿಯು ಹಾಸಿಗೆಗಳಲ್ಲಿ ಶೇ 60 ರಷ್ಟನ್ನು ಕೋವಿಡ್ ರೋಗಿಗಳಿಗಾಗಿ ಇರಿಸಿಕೊಳ್ಳಲು ಆದೇಶಿಸಲಾಗಿದೆ. "ಇದಲ್ಲದೆ 101 ಖಾಸಗಿ ಆಸ್ಪತ್ರೆಗಳು ತಮ್ಮ ವಾರ್ಡ್ ಬೆಡ್ ಸಾಮರ್ಥ್ಯದ ಕನಿಷ್ಠ ಶೇ ರಷ್ಟು COVID-19 ಸಂಬಂಧಿತ ಚಿಕಿತ್ಸೆಗಾಗಿ ಕಾಯ್ದಿರಿಸಲು ನಿರ್ದೇಶಿಸಲಾಗಿದೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ:ಎಪ್ರಿಲ್ 1 ರಿಂದ 45 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ


14 ಆಸ್ಪತ್ರೆಗಳು: ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆ, ಸರಿತಾ ವಿಹಾರ್; ಸರ್ ಗಂಗಾ ರಾಮ್ ಆಸ್ಪತ್ರೆ; ಹೋಲಿ ಫ್ಯಾಮಿಲಿ ಆಸ್ಪತ್ರೆ, ಓಖ್ಲಾ; ಮಹಾರಾಜ ಅಗ್ರಸೆನ್, ಪಂಜಾಬಿ ಬಾಗ್; ಮ್ಯಾಕ್ಸ್ ಆಸ್ಪತ್ರೆ, ಶಾಲಿಮಾರ್ ಬಾಗ್; ಫೋರ್ಟಿಸ್ ಆಸ್ಪತ್ರೆ, ಶಾಲಿಮಾರ್ ಬಾಗ್; ಮ್ಯಾಕ್ಸ್ ಆಸ್ಪತ್ರೆ, ಸಾಕೇತ್; ವೆಂಕಟೇಶ್ವರ ಆಸ್ಪತ್ರೆ, ದ್ವಾರಕಾ; ಶ್ರೀ ಬಾಲಾಜಿ ಆಕ್ಷನ್ ವೈದ್ಯಕೀಯ ಸಂಸ್ಥೆ, ಪಾಸ್ಚಿಮ್ ವಿಹಾರ್; ಜೈಪುರ ಗೋಲ್ಡನ್ ಆಸ್ಪತ್ರೆ, ರೋಹಿಣಿ; ಮಾತಾ ಚಾನನ್ ದೇವಿ ಆಸ್ಪತ್ರೆ, ಜನಕ್ಪುರಿ; ಪುಷ್ಪಾವತಿ ಸಿಂಘಾನಿಯಾ ಆಸ್ಪತ್ರೆ, ಸಾಕೇತ್; ಮಣಿಪಾಲ್ ಆಸ್ಪತ್ರೆ, ದ್ವಾರಕಾ, ಮತ್ತು ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಳು ಸೇರಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.