ಗಾಜಿಯಾಬಾದ್: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ನಮ್ಮ ಬೆರಳ ತುದಿಯಲ್ಲಿಯೇ ಬೇಕಾದ್ದನ್ನು ನಮ್ಮ ಬಳಿ ತರಿಸಿಕೊಳ್ಳುವ ಅವಕಾಶ ನಮಗಿದೆ. ಹಾ...! ನೆನಪಿಡಿ ಇಂತಹ ಅನುಕೂಲಗಳ ಜೊತೆಗೆ ಹಲವು ಸಂದರ್ಭಗಳಲ್ಲಿ ನಾವು ವಂಚನೆಗೆ ಒಳಗಾಗುವ ಸಾಧ್ಯತೆಯೂ ಇದೆ. ಅಂತಹದರಲ್ಲೇ ಒಂದು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್.


COMMERCIAL BREAK
SCROLL TO CONTINUE READING

ನೀವು ಸಹ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್(Online Food Order) ಮಾಡ್ತೀರಾ? ಹಾಗಿದ್ದರೆ ಎಚ್ಚರ! ದೆಹಲಿಯ ಪಕ್ಕದಲ್ಲಿರುವ ಗಾಜಿಯಾಬಾದ್ (Ghaziabadh) ನಿಂದ ಆನ್‌ಲೈನ್ ಊಟ ಆರ್ಡರ್ ಮಾಡಿದ ವಿದ್ಯಾರ್ಥಿಗೆ ಸಾವಿರಾರು ರೂ. ವಂಚನೆ ಆಗಿರುವ ಪ್ರಕರನವೊಂಡಿ ಬೆಳಕಿಗೆ ಬಂದಿದೆ. ಇಲ್ಲಿ, ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಠಿ ರೋಲ್ ಮತ್ತು ಒಂದು ರುಮಾಲಿ ರೊಟ್ಟಿಗಾಗಿ 91 ಸಾವಿರ ಪಾವತಿಸಿದ್ದಾರೆ. ವಾಸ್ತವವಾಗಿ, ಫೋನ್ ಕರೆ ಸಮಯದಲ್ಲಿ ಯುವಕ ಬ್ಯಾಂಕ್ ಖಾತೆಯಿಂದ ಹಣ ಡಿಡೆಕ್ಟ್ ಆಗಿದೆ. 


ಲಿಂಕ್ ರೋಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿ ಸಿದ್ಧಾರ್ಥ್, ಎರಡು ದಿನಗಳ ಹಿಂದೆ ಆನ್‌ಲೈನ್ ಫುಡ್ ಆ್ಯಪ್‌ನಿಂದ ಕಠಿ ರೋಲ್ ಮತ್ತು ರುಮಾಲಿ ರೊಟ್ಟಿಯನ್ನು ಆರ್ಡರ್ ಮಾಡಿದ್ದರು. ಇದಕ್ಕಾಗಿ 142 ರೂಪಾಯಿಗಳನ್ನು ಮೊದಲೇ ಪಾವತಿಸಿದ್ದೇನೆ ಎಂದು ಸಿದ್ಧಾರ್ಥ್ ಹೇಳಿದ್ದಾರೆ. ಆದರೆ, ಎಷ್ಟೊತ್ತಾದರೂ ಆರ್ಡರ್ ಮಾಡಿದ ಫುಡ್ ಬರದಿದ್ದಾಗ, ಅವರು ಆ್ಯಪ್ ಮೂಲಕ ಈ ಬಗ್ಗೆ ವಿವರಣೆ ಕೇಳಿದರು. ಅಲ್ಲಿಂದ ಈಗಾಗಲೇ ಆಹಾರವನ್ನು ರವಾನಿಸಲಾಗಿದೆ, ಆದರೆ ಅವರು ಆಹಾರ ತೆಗೆದುಕೊಂಡಿಲ್ಲ ಎಂಬ ಮಾಹಿತಿ ಬಂದಿತು. ಆದಾಗ್ಯೂ, ತಮಗೆ ಆಹಾರ ತಲುಪಿಲ್ಲ ಎಂದು ದೂರಿದ ಸಿದ್ಧಾರ್ಥ್, ತಕ್ಷಣ ಕಸ್ಟಮರ್ ಕೇರ್ ಗೆ ಕರೆ ಮಾಡಿದರು. ಸಿದ್ಧಾರ್ಥ್ ಪ್ರಕಾರ ಎಷ್ಟೇ ಬಾರಿ ಪ್ರಯತ್ನಿಸಿದರೂ ಅವರಿ ಕರೆ ಸಿಗುತ್ತಿರಲಿಲ್ಲ.


ಅದಾಗ್ಯೂ ಹಲವು ಬಾರಿ ಕಸ್ಟಮರ್ ಕೇರ್ ಗೆ ಕಾಲ್ ಮಾಡಲು ಪ್ರಯತ್ನಿಸಿದ್ದಾಗಿ ತಿಳಿಸಿದ ಸಿದ್ಧಾರ್ಥ್,  ಈ ಸಮಯದಲ್ಲಿ, ಕೊನೆಗೂ ಅವರು ಕರೆ ಸ್ವೀಕರಿಸಿದರು ಮತ್ತು ಅಪ್ಲಿಕೇಶನ್‌ನ ಕಸ್ಟಮರ್ ಕೇರ್ ಜೊತೆ ಮಾತನಾಡಿ ಹಣವನ್ನು ಹಿಂದಿರುಗಿಸುವಂತೆ ಕೇಳಿದೆ. ಬಳಿಕ ಒಂದು ಆನ್‌ಲೈನ್ ಪಾವತಿ ಲಿಂಕ್ ಕೋರಲಾಯಿತು. ಇದರ ಬೆನ್ನಲ್ಲೇ ನನ್ನ ಖಾತೆಯಿಂದ 91,196 ರೂಪಾಯಿ ಪಡೆಯಲಾಗಿದೆ. ಒಟ್ಟು 7 ವಹಿವಾಟುಗಳು ನಡೆದಿವೆ. ಫೋನ್‌ನಲ್ಲಿ ಸಂದೇಶವನ್ನು ನೋಡುವ ಹೊತ್ತಿಗೆ ತಡವಾಗಿತ್ತು ಎಂದು ಸಿದ್ಧಾರ್ಥ್ ತಮ್ಮ ಅಳಲು ತೋಡಿಕೊಂಡಿದ್ದಾರೆ.


ಸಾವಿರಾರು ರೂ. ಖಾತೆಯಿಂದ ಡೆಬಿಟ್ ಆದ ಬಗ್ಗೆ ಮಾಹಿತಿ ತಿಳಿದೊಡನೆ ನನ್ನ ಕೈ ಕಾಲೇ ನಿಂತು ಹೋಯಿತು. ತಕ್ಷಣ ಬ್ಯಾಂಕಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದೆ. ಆದರೆ ಅಲ್ಲಿಂದಲೂ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ನಂತರ ಘಟನೆ ಬಗ್ಗೆ ತನ್ನ ಪೋಷಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದರು. ಬಳಿಕ ಪೊಲೀಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ದೂರು ದಾಖಲಿಸಿದೆ. ಪೊಲೀಸರು ಸಂಪೂರ್ಣ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸಿದ್ಧಾರ್ಥ್ ಘಟನೆ ಬಗ್ಗೆ ವಿವರಿಸಿದ್ದಾರೆ.