ಹಾಪುರ: ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬೃಹತ್ ಹೆಬ್ಬಾವನ್ನು ಅಲ್ಲಿದ್ದ ರೈತರು ಗಾಬರಿಗೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಜಮೀನಿನಲ್ಲಿ ಕೆಲಸ ಮಾಡುವಾಗ ಸುಮಾರು 15 ಅಡಿ ಉದ್ದದ ಹೆಬ್ಬಾವನ್ನು ಕಂಡು ಭಯವಾಯಿತು. ಕೂಡಲೇ ಇತರ ಗ್ರಾಮಸ್ಥರಿಗೆ ಮಾಹಿತಿ ನೀಡಿ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಲಾಯಿತು. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ರಕ್ಷಿಸಿ ನದಿಗೆ ಬಿಡಲಾಯಿತು ಎಂದು ರೈತ ಜ್ಞಾನೇಂದ್ರ ತಿವಾರಿ ತಿಳಿಸಿದ್ದಾರೆ.


ಸುಮಾರು 15 ಅಡಿ ಉದ್ದ ಮತ್ತು 70 ಕೆ.ಜಿ. ತೂಕವಿದ್ದ ಬೃಹತ್ ಹೆಬ್ಬಾವನ್ನು ಸುಮಾರು ಐದು ಜನರ ರಕ್ಷಣಾ ತಂಡ ಹಿಡಿದು, ಹಾವನ್ನು ರಕ್ಷಿಸಿ ನದಿಗೆ ಬಿಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ರೇಂಜರ್ ಪ್ರತಾಪ್ ಸೈನಿ ಹೇಳಿದ್ದಾರೆ.