ನವದೆಹಲಿ: ಮಹಾರಾಷ್ಟ್ರದಲ್ಲಿ 15 ಸ್ವತಂತ್ರ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಸೇರಲು ಸಿದ್ಧರಾಗಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಬಿಜೆಪಿ ಮತ್ತು ಶಿವಸೇನೆಯಿಂದ ಬಂಡಾಯ ಎದ್ದವರು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

'15 ಸ್ವತಂತ್ರ ಶಾಸಕರು ನನ್ನನ್ನು ಸಂಪರ್ಕಿಸಿದ್ದಾರೆ ಮತ್ತು ಅವರು ನಮ್ಮೊಂದಿಗೆ ಬರಲು ಸಿದ್ಧರಾಗಿದ್ದಾರೆ. ಇತರರು ಸಹ ಬರಬಹುದು ಆದರೆ ಈ 15 ಮಂದಿ ಖಂಡಿತವಾಗಿಯೂ ನಮ್ಮೊಂದಿಗೆ ಬರುತ್ತಾರೆ. ಅವರಲ್ಲಿ ಹೆಚ್ಚಿನವರು ಬಿಜೆಪಿ ಅಥವಾ ಶಿವಸೇನೆಯಿಂದ ಬಂಡಾಯ ಎದ್ದವರು 'ಎಂದು ಫಡ್ನವೀಸ್ ಹೇಳಿದ್ದಾರೆ.


ಇದೇ ವೇಳೆ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಬಿಜೆಪಿ-ಶಿವಸೇನಾ ಮೈತ್ರಿ ಸರ್ಕಾರಕ್ಕೆ ಜನಾದೇಶ ನೀಡಿದ ಮಹಾರಾಷ್ಟ್ರದ ಜನರಿಗೆ ದೇವೇಂದ್ರ ಫಡ್ನವೀಸ್ ಕೃತಜ್ಞತೆ ಸಲ್ಲಿಸಿದರು.'ನಾವು ಶಿವಸೇನೆ ಮತ್ತು ಬಿಜೆಪಿ ನಡುವೆ ಏನು ನಿರ್ಧರಿಸಿದ್ದೇವೆ ಎಂಬುದರ ಪ್ರಕಾರ ಮುಂದುವರಿಯಲಿದ್ದೇವೆ. ಈ ವಿಚಾರವಾಗಿ ಸೂಕ್ತ ಸಮಯ ಬಂದಾಗ ನಿಮಗೆ ತಿಳಿಯಲಿದೆ. ಅತ್ಯಂತ ಸ್ಪಷ್ಟ ಮತ್ತು ನಿರ್ಣಾಯಕ ಜನಾದೇಶವನ್ನು ನೀಡಿದ ಮಹಾರಾಷ್ಟ್ರದ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಅವರು ಹೇಳಿದರು.