ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರಿಂದ ಅನುಮತಿ ಪಡೆದ ಒಂದು ದಿನದ ನಂತರ ಜೆ & ಕೆ ನ್ಯಾಷನಲ್ ಕಾನ್ಫರೆನ್ಸ್‌ನ 15 ಸದಸ್ಯರ ನಿಯೋಗ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಭಾನುವಾರ ಅವರ ನಿವಾಸದಲ್ಲಿ ಭೇಟಿ ಮಾಡಿತು.


COMMERCIAL BREAK
SCROLL TO CONTINUE READING

ಎನ್‌ಸಿ ನಾಯಕರಾದ ಹಸ್ನೈನ್ ಮಸೂಡಿ ಮತ್ತು ಅಕ್ಬರ್ ಲೋನ್ ಅವರು ಫಾರೂಕ್ ಮತ್ತು ಅವರ ಪತ್ನಿ ಮೊಲಿಯನ್ನು ಶ್ರೀನಗರದ ತಮ್ಮ ನಿವಾಸದಲ್ಲಿ ಭೇಟಿಯಾದ ವೀಡಿಯೊವನ್ನು ಈಗ ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿದೆ.81 ವರ್ಷದ ಫಾರೂಕ್ ಅಬ್ದುಲ್ಲಾ ಅವರ ಪುತ್ರ ಮತ್ತು ಎನ್‌ಸಿ ಉಪಾಧ್ಯಕ್ಷ ಒಮರ್ ಅವರನ್ನು ರಾಜ್ಯದ ಅತಿಥಿಗೃಹದಲ್ಲಿ ಬಂಧಿಸಲಾಗಿದೆ. ಫಾರೂಕ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ.


ಈಗ ಭೇಟಿಯಾಗಿರುವ ಈ ನಿಯೋಗದಲ್ಲಿ ಪಕ್ಷದ ಪ್ರಾಂತೀಯ ಅಧ್ಯಕ್ಷ ದೇವೇಂದರ್ ಸಿಂಗ್ ರಾಣಾ ಪಕ್ಷದ ಮಾಜಿ ಶಾಸಕರು ಇದ್ದರು ಎನ್ನಲಾಗಿದೆ. ರಾಣಾ ಅವರು ಇದಕ್ಕೂ ಮೊದಲು ರಾಜ್ಯಪಾಲ ಮಲಿಕ್ ಅವರಿಂದ ಭೇಟಿಯಾಗಲು ಅನುಮತಿ ಕೋರಿದ್ದರು.


ಆಗಸ್ಟ್ 5 ರಂದು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಈಗ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಚುನಾವಣೆ ಇರುವ ಹಿನ್ನಲೆಯಲ್ಲಿ ಈ ವಿಷಯ ಚರ್ಚೆಯ ಕೇಂದ್ರಬಿಂದುವಾಗಿದೆ ಎಂದು ನಂಬಲಾಗಿದೆ. 370 ನೇ ವಿಧಿ ಅನ್ವಯ ಕೇಂದ್ರವು ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದಲೂ, ಫಾರೂಕ್ ಮತ್ತು ಒಮರ್ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಮತ್ತು ರಾಜ್ಯದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಇತರ ಉನ್ನತ ನಾಯಕರನ್ನು ಬಂಧಿಸಿರುವುದಕ್ಕೆ ಎನ್‌ಸಿ ನಾಯಕರು ವಿಷಾದ ವ್ಯಕ್ತಪಡಿಸಿದ್ದರು.


ಸದ್ಯದಲ್ಲೇ ಗೃಹ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.