ಮುಜಾಫರ್ಪುರ್: ಬಿಹಾರದ ಮುಜಾಫರ್ ಪುರದ ಪ್ರಸಿದ್ಧ ಗರೀಬ್ ನಾಥ್ ದೇವಾಲಯದಲ್ಲಿ ಮೂರನೇ ಶ್ರಾವಣ ಸೋಮವಾರದ ಅಂಗವಾಗಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ನೂಕುನುಗ್ಗಲು ಸೃಷ್ಟಿಯಾಗಿ ಗುಂಪನ್ನು  ನಿಯಂತ್ರಿಸಲಾಗದೆ ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದಲ್ಲಿ ಹಲವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. 



COMMERCIAL BREAK
SCROLL TO CONTINUE READING

ಕಾಲ್ತುಳಿತದ ಸಮಯದಲ್ಲಿ ಪೊಲೀಸರ ಉದಾಸೀನತೆ ಕೂಡ ಕಂಡುಬಂದಿದೆ. ನಗರದ ಕಲ್ಯಾಣಿ ಚೌಕ್ ಬಳಿಯ ಕನ್ವಾರೀಸ್ ಸೇವೆಯಲ್ಲಿ ತೊಡಗಿರುವ ಸದಸ್ಯರ ನಡುವೆ ಕೂಡಾ ಘರ್ಷಣೆ ಕಂಡುಬಂದಿದೆ. 


ಭದ್ರತಾ ವ್ಯವಸ್ಥೆಗಾಗಿ 373 ಮ್ಯಾಜಿಸ್ಟ್ರೇಟ್ ಮತ್ತು 373 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, 892 ಪೋಲಿಸ್ ಕಾನ್ಸ್ಟೇಬಲ್ ಗಳನ್ನು ನಿಯೋಜಿಸಲಾಗಿದೆ. ಇಷ್ಟೆಲ್ಲಾ ಭದ್ರತಾ ವ್ಯವಸ್ಥೆಯ ನಡುವೆಯೂ ಈ ರೀತಿಯ ಘಟನೆ ನಡೆದಿರುವುದರ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.