ನೀವು ಅಮೇರಿಕಾದಲ್ಲಿ ಶಾಶ್ವತವಾಗಿ ನೆಲೆಸಬೇಕೆ? ಹಾಗಾದ್ರೆ 150 ವರ್ಷ ಕಾಯಿರಿ !
ವಾಷಿಂಗ್ಟನ್: ಹೌದು, ಹೆಚ್ಚಿನ ವಿದ್ಯಾಬ್ಯಾಸ ಮಾಡಿ ಶಾಶ್ವತವಾಗಿ ಅಮೇರಿಕಾದಲ್ಲಿ ನೆಲೆಗೊಂಡು ಕೆಲಸಮಾಡಬೇಕೆಂದರೆ ಅದಕ್ಕೆ ಗ್ರೀನ್ ಕಾರ್ಡ್ ಪಡೆಯಲು ಕನಿಷ್ಠ 150 ವರ್ಷ ಕಾಯಬೇಕೆಂತೆ!
ಇತ್ತೀಚಿಗೆ ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆ ಗ್ರೀನ್ ಕಾರ್ಡ್ ಗಾಗಿ ಒಟ್ಟು ಅರ್ಜಿದಾರರ ಸಂಖ್ಯೆಯನ್ನು ಬಹಿರಂಗಪಡಿಸಿದ ನಂತರ ವಾಷಿಂಗ್ ಟನ್ ನ ಮೂಲಕದ ಕ್ಯಾಟೊ ಇನ್ಸ್ಟಿಟ್ಯೂಟ್ ಎನ್ನುವ ಸಂಸ್ಥೆಯು ಈ ಕುರಿತಾಗಿ ಸಮಗ್ರವಾಗಿ ಅಧ್ಯಯನ ಮಾಡಿ ಭಾರತೀಯರು ಅಮೇರಿಕಾದ ಗ್ರೀನ್ ಕಾರ್ಡ್ ಹೊಂದಬೇಕಾದರೆ ಕನಿಷ್ಟ 150 ವರ್ಷಗಳುವರೆಗೂ ಕಾಯಬೇಕೆಂದು ಅದು ಲೆಕ್ಕಾಚಾರ ಹಾಕಿದೆ.
ಇವರೆಗೂ ಈ ವರ್ಷದ ಎಪ್ರಿಲ್ 20 ರ ಪ್ರಕಾರ ಒಟ್ಟು 632,219 ಭಾರತೀಯರು ಅಮೆರಿಕಾದಲ್ಲೇ ಶಾಶ್ವತವಾಗಿ ನೆಲೆಸಲು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.ಆದರೆ ಹೆಚ್ಚಿನ ವ್ಯಾಸಾಂಗ ಕೈಗೊಂಡು ಇಬಿ-2 ವರ್ಗದ ವ್ಯಾಪ್ತಿಗೆ ಬರುವರೆಲ್ಲರು ಕೂಡಾ ಗ್ರೀನ್ ಕಾರ್ಡ್ ಪಡೆಯಲು 151 ವರ್ಷಗಳ ಕಾಯಬೇಕು ಎಂದು ಅದು ತಿಳಿಸಿದೆ.ಇಬಿ-2 ಕೆಟಗರಿಯಲ್ಲಿ ಕುಟುಂಬ ಸಹಿತ ಅರ್ಜಿದಾರರು ಸೇರಿದಂತೆ ಒಟ್ಟಾರೆ 4,33,368 ಜನ ಭಾರತೀಯರಿದ್ದಾರೆ ಎಂದು ತಿಳಿದು ಬಂದಿದೆ.