ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ 6 ಬಾಂಗ್ಲಾ ಪ್ರಜೆಗಳೂ ಸೇರಿದಂತೆ 16 ಮಂದಿ ಬಂಧನ
ಬಂಧಿತರೆಲ್ಲರೂ ರೈಲಿನಲ್ಲಿ ಬೆಂಗಳೂರಿನಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದರು.
ವಿಶಾಖಪಟ್ಟಣಂ (ಆಂಧ್ರಪ್ರದೇಶ): ಅಧಿಕೃತ ಗುರುತಿನ ಪುರಾವೆಗಳಿಲ್ಲದೆ ಪ್ರಯಾಣಿಸಿದ್ದಕ್ಕಾಗಿ ಆರು ಬಾಂಗ್ಲಾದೇಶ ಪ್ರಜೆಗಳು ಸೇರಿದಂತೆ 16 ಜನರನ್ನು ಇಲ್ಲಿನ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ ಬಂಧಿಸಲಾಗಿದೆ.
ಮೂಲಗಳ ಪ್ರಕಾರ, ಆರು ಬಾಂಗ್ಲಾದೇಶ ಪ್ರಜೆಗಳು ಪಾಸ್ಪೋರ್ಟ್ ಇಲ್ಲದೆ ಪ್ರಯಾಣಿಸುತ್ತಿದ್ದರೆ, ಉಳಿದ ಜನರು ಪಶ್ಚಿಮ ಬಂಗಾಳದ ಖರಗ್ಪುರಕ್ಕೆ ಸೇರಿದವರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ ಪೊಲೀಸರು ಮಂಗಳವಾರ ಮಧ್ಯಾಹ್ನ ಯಶವಂತಪುರ-ಹೌರಾ ರೈಲನ್ನು ಪರಿಶೀಲಿಸಿದರು. ಬಂಧಿತರೆಲ್ಲರೂ ರೈಲಿನಲ್ಲಿ ಬೆಂಗಳೂರಿನಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದರು.
ವಿಶಾಖಪಟ್ಟಣಂ ಪೊಲೀಸರು, ಪೊಲೀಸ್ ಕಾರ್ಯಪಡೆ ಜೊತೆಗೆ ಸರ್ಕಾರಿ ರೈಲ್ವೆ ಪೊಲೀಸರು ಮತ್ತು ರೈಲ್ವೆ ಸಂರಕ್ಷಣಾ ಪಡೆ ಯಶವಂತಪುರ-ಹೌರಾ ರೈಲನ್ನು ಪರಿಶೀಲಿಸುವ ಸಂದರ್ಭದಲ್ಲಿ 16 ಮಂದಿಯನ್ನು ಬಂಧಿಸಿದ್ದಾರೆ.