ನವದೆಹಲಿ: ಪೊಕ್ ಮತ್ತು ಪಾಕಿಸ್ತಾನದಲ್ಲಿ 16 ಭಯೋತ್ಪಾದನಾ ಶಿಬಿರಗಳು ಈಗಲೂ ಜೀವಂತವಾಗಿವೆ ಎಂಬ ಮಾಹಿತಿಯನ್ನು ಭಾರತೀಯ ಗುಪ್ತಚರ ಇಲಾಖೆ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.  ಈ ಭಯೋತ್ಪಾದನಾ ಶಿಬಿರಗಳಲ್ಲಿ ಐದು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ 2 ಶಿಬಿರಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ ಮತ್ತು ಖೈಬರ್ ಪಖ್ತಂಕವಾದ ಮನೆರಾ ಜಿಲ್ಲೆಯಲ್ಲಿ 3 ಶಿಬಿರಗಳು ಸಕ್ರಿಯವಾಗಿವೆ.  


COMMERCIAL BREAK
SCROLL TO CONTINUE READING

ಹನ್ನೊಂದು ಶಿಬಿರಗಳ ಪೈಕಿ ಐದು ಉಗ್ರ ತರಬೇತಿ ಶಿಬಿರಗಳು ಪಿಓಕೆಯ ಮುಜಫ‌ರಾಬಾದ್‌, ಕೋಟ್‌ಲಿ ಮತ್ತು ಬರ್ನಾಲಾ ಪ್ರದೇಶಗಳಲ್ಲಿವೆ. ಪಾಕಿಸ್ಥಾನದ ಇತರೆಡೆಗಳಲ್ಲಿ ಸಕ್ರಿಯವಾಗಿರುವ ಐದು ಉಗ್ರ ಶಿಬಿರಗಳ ಪೈಕಿ ಎರಡು ಪಾಕ್‌ ಪಂಜಾಬ್‌ ಮತ್ತು ಮನ್‌ಶೇರಾದಲ್ಲಿ ಇವೆ. ಪಿಓಕೆಯ ಬೋಯಿ, ಲಕಾ ಎ ಗಾಯಿರ್‌, ಶೇರ್ಪಾಯಿ, ದಿಯೋಲಿನ್‌, ಖಾಲಿದ ಬಿನ್‌ ವಾಲಿದ್‌, ಗರೀ ಮತ್ತು ದೋಪಟ್ಟಾ ಗಳಲ್ಲಿ ಉಗ್ರ ತರಬೇತಿ ಶಿಬಿರಗಳಿವೆ ಎಂದು ಗುಪ್ತಚರ ಇಲಾಖೆ ಹೇಳಿದೆ. 


ಪಿಓಕೆಯ ಬೋಯಿ, ಲಕಾ ಎ ಗಾಯಿರ್‌, ಶೇರ್ಪಾಯಿ, ದಿಯೋಲಿನ್‌, ಖಾಲಿದ ಬಿನ್‌ ವಾಲಿದ್‌, ಗರೀ ಮತ್ತು ದೋಪಟ್ಟಾ ಗಳಲ್ಲಿ ಉಗ್ರ ತರಬೇತಿ ಶಿಬಿರಗಳಿವೆ. ಈ ಶಿಬಿರಗಳಲ್ಲಿ ಆತ್ಮಾಹುತಿ ಬಾಂಬರ್ ಗಳಿಗೆ ತರಬೇತಿ ನೀಡಲಾಗುತ್ತಿದೆ. ಮಾತ್ರವಲ್ಲ, ಎಲ್ ಇಡಿ ಸ್ಫೋಟಿಸುವುದು ಹೇಗೆ? ನುಸುಳುಕೋರರಿಗೆ ತರಬೇತಿ ನೀಡುವುದು, ಐಇಡಿ ಬಾಂಬ್‌ ಬ್ಲಾಸ್ಟ್‌, ಸ್ನೆ„ಪರ್‌ ಅಟ್ಯಾಕ್‌, ಜಲಾಂತರ್ಗತ ಉಗ್ರ ಕಾರ್ಯಾಚರಣೆಗಳು ಮತ್ತು ಡ್ರೋನ್‌ ಗಳ ನಿರ್ವಹಣೆ, ಶಾಂತಿ ಕದಡುವುದು ಹೇಗೆ ಎಂಬಿತ್ಯಾದಿ ತರಬೇತಿಯ ಜೊತೆಗೆ ಉಗ್ರ ಚಟುವಟಿಕೆಗಾಗಿ ತಂತ್ರಜ್ಞಾನ ಬಳಸುವುದು ಹೇಗೆ ಎಂಬ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ. 2018 ರಲ್ಲಿ 560 ಕ್ಕೂ ಹೆಚ್ಚು ಉಗ್ರರಿಗೆ ಭಾರತ ವಿರೋಧಿ ಚಟುವಟಿಕೆಗಾಗಿ ಎಲ್ಲ ರೀತಿಯ ತರಬೇತಿ ನೀಡಲಾಗಿದೆ ಎನ್ನಲಾಗಿದೆ.


ಮೂಲಗಳ ಪ್ರಕಾರ, ಭಾರತವು ಪಾಕಿಸ್ತಾನದ ಉಗ್ರರ ಅಡಗುತಾಣಗಳು ಹಾಗೂ ಶಿಬಿರಗಳ ಸಾಟಿಲೈಟ್ ಇಮೇಜ್ ಗಳನ್ನೂ ಇತರ ದೇಶಗಳೊಂದಿಗೆ ಹಂಚಿಕೊಂಡು ಆ ಮೂಲಕ ಪಾಕಿಸ್ತಾನವನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮುಜುಗರಕ್ಕೆ ಗುರಿಪಡಿಸಲು ಯತ್ನಿಸಲಿದೆ ಎನ್ನಲಾಗಿದೆ.