ನವದೆಹಲಿ: ದೇಶದಾದ್ಯಂತ ಒಂದೇ ಪಡಿತರ ಚೀಟಿಯನ್ನು ಜಾರಿಗೆ ತರುವ ಉದ್ದೇಶ ಮಹತ್ವದ ಯೋಜನೆ 'ಒನ್ ನೇಷನ್, ಒನ್ ರೇಷನ್ ಕಾರ್ಡ್‌' ಗೆ ಸಂಬಂಧಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆಯನ್ನು ಕೇಂದ್ರ ಬಜೆಟ್ ನಲ್ಲಿ ಮಾಡಿದ್ದರು.


COMMERCIAL BREAK
SCROLL TO CONTINUE READING

ಯೋಜನೆಯ ಜಾಲಕ್ಕೆ ಎಲ್ಲ ರಾಜ್ಯಗಳು ಹಾಗೂ 1 ಕೇಂದ್ರಾದಳಿತ ಪ್ರದೇಶವನ್ನು ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು. ಈ ಮತಿತಂನೆ ಹದಿನೇಳು ರಾಜ್ಯಗಳಲ್ಲಿ 'ಒನ್ ನೇಷನ್, ಒನ್ ರೇಷನ್ ಕಾರ್ಡ್‌'(One Nation One Ration card) ಅನುಷ್ಠಾನ ಆರಂಭವಾಗಿದ್ದು ಉತ್ತರಾಖಂಡ್ ಹೊಸದಾಗಿ ಸೇರಿಕೊಂಡಿದೆ.


ನಾಳೆಯೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ, ತಪ್ಪಿದರೆ ಬುಧವಾರದವರೆಗೆ ಕಾಯಬೇಕು..!


ಈ ಯೋಜನೆ ಅಳವಡಿಕೆ ಮಾಡಿಕೊಳ್ಳುವ ರಾಜ್ಯಗಳಿಗೆ ಕೇಂದ್ರ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಇಲಾಖೆ(Finance Department of India)ಯಿಂದ ಹೆಚ್ಚುವರಿಯಾಗಿ 37,600 ಕೋಟಿ ರೂ. ಪಡೆದುಕೊಳ್ಳಬಹುದು.


ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(National Food Security Act)ಯಡಿ ಈ ಯೋಜನೆ ಜಾರಿಯಾಗುತ್ತಿದೆ. ನಾಗರಿಕ ಆಹಾರ ಪೂರೈಕೆ ವಿಚಾರದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದೇ ಬಣ್ಣಿಸಲಾಗಿದೆ.


ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕನಾಗಿ ರವ್ನೀತ್ ಸಿಂಗ್ ಬಿಟ್ಟು ನೇಮಕ


ಕಾರ್ಮಿಕರು, ದಿನಗೂಲಿ ನೌಕರರು, ನಗರ ಭಾಗದ ಬಡ ಜನರು, ಬೀದಿ ಬದಿ ವ್ಯಾಪಾರಿಗಳು, ಅರೆಕಾಲಿಕ ನೌಕರರು, ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆ ನೆರವಾಗಲಿದೆ.


ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿಗೊಳ್ಳುವುದರಿಂದ 30 ರಾಜ್ಯಗಳಲ್ಲಿ 67 ಕೋಟಿ ಫಲಾನುಭವಿಗಳಿಗೆ ಪಡಿತರ(Ration card) ಸೌಲಭ್ಯ ಸಿಗಲಿದೆ. ಮಾರ್ಚ್ 2021ರೊಳಗೆ ಶೇ 100ರಷ್ಟು ಫಲಾನುಭವಿಗಳನ್ನು ಕಾಣುವುದು ಸರ್ಕಾರ ಗುರಿ. ಯಾವುದೇ ಕುಟುಂಬ ಅಥವಾ ವ್ಯಕ್ತಿ ಯಾವುದೇ ಊರಿಗೆ ಹೋದರೂ ಅಲ್ಲಿರುವ ಪಡಿತರ ವಿತರಣೆ ಅಂಗಡಿಯಲ್ಲಿ ರೇಷನ್ ಕಾರ್ಡ್‌ ತೋರಿಸಿ ಆಹಾರ ಪದಾರ್ಥಗಳನ್ನು ಪಡೆಯಬಹುದಾಗಿದೆ. ಅಂದರೆ ಈ ಯೋಜನೆ ಅಳವಡಿಕೆ ಮಾಡಿಕೊಂಡ ಯಾವುದೆ ರಾಜ್ಯದಲ್ಲಿ ಪಡಿತರ ಪಡೆದುಕೊಳ್ಳಬಹುದು.


ಪ.ಬಂಗಾಳ ಚುನಾವಣೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ನಾಯಕಿ ಐಷೆ ಘೋಷ್ ಕಣಕ್ಕೆ


ಇದು ಬೋಗಸ್ ಮತ್ತು ನಕಲಿ ಕಾರ್ಡ್(Fake Card) ಗಳಿಗೆ ಬ್ರೇಕ್ ಹಾಕಲಿದೆ. ಈ ಮೂಲಕ ಅರ್ಹರಿಗೆ ಲಾಭ ಸಿಗಲಿದ್ದು ಸೋರಿಕೆಯನ್ನು ತಡೆಯಲಿದೆ. ಆಧುನಿಕತೆ ಅಳವಡಿಕೆ ಮತ್ತೊಂದು ಹೆಜ್ಜೆಯಾಗಿದ್ದು ಸಂಬಂಧಿಸಿದವರ ಆಧಾರ್ ಲಿಂಕ್ ಮಾಡುವುದರಿಂದ ಸುಲಭವಾಗಲಿದೆ. ಇದೆಲ್ಲದರ ಜತೆಗೆ ಯೋಜನೆ ಅಳವಡಿಕೆ ಮಾಡಿಕೊಳ್ಳುವ ರಾಜ್ಯಗಳು ತಮ್ಮ ಜಿಎಸ್‌ಡಿಪಿ(ರಾಜ್ಯಗಳ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಯಲ್ಲಿ ಶೇ. 2ರಷ್ಟನ್ನು ಈ ಯೋಜನೆಗಾಗಿ ಪಡೆದುಕೊಳ್ಳಲು ಸಾಧ್ಯವಿದೆ.


ಈ ಯೋಜನೆಯಡಿ ಯಾವ ಯಾವ ರಾಜ್ಯಗಳು ಎಷ್ಟು ಹಣ(Money) ಪಡೆದುಕೊಳ್ಳಬಹುದು ಎಂಬ ವಿವರವನ್ನು ನೀಡಲಾಗಿದೆ. 1. ಆಂಧ್ರ ಪ್ರದೇಶ-2,525(ಕೋಟಿ ರೂ.) 2. ಗೋವಾ- 223 3. ಗುಜರಾತ್- 4,352 4. ಹರ್ಯಾಣಾ- 2,146 5. ಹಿಮಾಚಲ ಪ್ರದೇಶ- 438 6. ಕರ್ನಾಟಕ- 4,509 7. ಕೇರಳ- 2,261 8. ಮಧ್ಯ ಪ್ರದೇಶ- 2,373 9. ಮಣಿಪುರ- 75 10.ಓರಿಸ್ಸಾ- 1,429 11. ಪಂಜಾಬ್- 1,516 12. ರಾಜಸ್ಥಾನ- 2,731 13. ತಮಿಳು ನಾಡು- 4,813 14. ತೆಲಂಗಾಣ -2,508 15. ತ್ರಿಪುರಾ- 148 16. ಉತ್ತರಾಖಂಡ-702 17. ಉತ್ತರ ಪ್ರದೇಶ- 4,851


ಪಾಕ್ ನಿಂದ ಹಸ್ತಾಂತರವಾಗಿದ್ದ ಗೀತಾಳ ಕುಟುಂಬ ಪತ್ತೆ ಹಚ್ಚಲು ಎನ್‌ಜಿಒ ಯಶಸ್ವಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.