ತಿರುವನಂತಪುರಂ: ಕೇರಳದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ 18 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಾಹಿತಿಯ ಪ್ರಕಾರ ಇಡುಕ್ಕಿಯಲ್ಲಿ 10 ಮಂದಿ, ಮಲಪ್ಪುರಂ ನಲ್ಲಿ ಐವರು, ಕಣ್ಣೂರಿನಲ್ಲಿ ಇಬ್ಬರು ಮತ್ತು ವಯನಾಡ್‌ ಜಿಲ್ಲೆಯಲ್ಲಿ ಓರ್ವರು ಭೂಕುಸಿತದಿಂದ ಮೃತಪಟ್ಟಿದ್ದಾರೆ. ಅಲ್ಲದೆ ಕೆಲವರು ಕಾಣೆಯಾಗಿರುವ ಬಗ್ಗೆಯೂ ವರದಿ ಮಾಡಲಾಗಿದೆ.




ಇಂದು ಬೆಳಗ್ಗೆ ಇಡಮಲಯರ್‌ ಅಣೆಕಟ್ಟಿನಿಂದ ಸುಮಾರು 600 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ, ಇದು 169.95 ಮೀಟರ್ಗಳಷ್ಟು ನೀರಿನ ಮಟ್ಟವನ್ನು ಮೀರಿದೆ. 


26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಗೇಟ್ ತೆರೆದ ಇಡುಕ್ಕಿ ಡ್ಯಾಮ್
ಅತೀ ಹೆಚ್ಚು ಪ್ರಮಾಣದ ನೀರನ್ನು ಸಂಗ್ರಸಬಲ್ಲ ದೇಶದ ಅತಿ ದೊಡ್ಡ ಆಣೆಕಟ್ಟು ಇಡುಕ್ಕಿ ಡ್ಯಾಮ್ ಗೇಟನ್ನು 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗಿದೆ. ಮುಂಗಾರು ಮಳೆ ಹಿನ್ನಲೆಯಲ್ಲಿ ಕೇರಳದಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಇಡುಕ್ಕಿ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಈಗಾಗಲೇ ಡ್ಯಾಂ ತುಂಬಿದ್ದು, ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದೇ ಕಾರಣಕ್ಕೆ ಹೆಚ್ಚುವರಿ ನೀರನ್ನು ಹೊರಗೆ ಬಿಡಲು ಆದೇಶಿಸಲಾಗಿದೆ. ಇನ್ನು ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಪೆರಿಯಾರ್ ನದಿ ಪಾತ್ರದ ಗ್ರಾಮಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎತ್ತರ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.