ಚೆನ್ನೈ: ಎಐಎಡಿಎಂಕೆ ಪ್ರಧಾನ ಉಪ ಕಾರ್ಯದರ್ಶಿಯಾಗಿದ್ದ ಟಿಟಿವಿ ದಿನಕರನ್ ಗೆ ನಿಷ್ಠರಾಗಿರುವ 18 ಶಾಸಕರನ್ನು ವಜಾಗೊಳಿಸಿ ತಮಿಳುನಾಡು ಅಸೆಂಬ್ಲಿ ಇಂದು ಆದೇಶ ಹೊರಡಿಸಿದೆ. ತಮಿಳುನಾಡಿನ ವಿಧಾನಸಭಾ ಸ್ಪೀಕರ್ ಪಿ.ಧನಪಾಲ್ ಈ ಆದೇಶವನ್ನು ಹೊರಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಪಿ. ಧನಪಾಲ್ ಆದೇಶ ಹೊರಡಿಸಿ ದೃಢೀಕರಿಸಿದ ಎಐಎಡಿಎಂಕೆ ಎಂಎಲ್ಎಗಳ ಹೆಸರುಗಳನ್ನು ಎಎನ್ಐ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ. 


 



 


1986 ರ ತಮಿಳುನಾಡು ಅಸೆಂಬ್ಲಿಯ ಸದಸ್ಯರ ಕಾನೂನಿನ ಬದಲಾವಣೆಯ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು. ಇದರ ಪರಿಣಾಮವಾಗಿ, ಈ ಶಾಸಕರು ತಮ್ಮ ಸದಸ್ಯತ್ವವನ್ನು ಅಸೆಂಬ್ಲಿಯಲ್ಲಿ ಕೊನೆಗೊಳಿಸಿದ್ದಾರೆ.


ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಯಲಲಿತಾ ಅವರ ನಿಧನದ ನಂತರ, ಅಧಿಕಾರ ವಹಿಸಿಕೊಂಡಿದ್ದ ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರನ್ನು ಸೆಪ್ಟೆಂಬರ್ 12 ರಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿಗಳ ಹುದ್ದೆಯಿಂದ ವಜಾಗೊಳಿಸಲಾಗಿತ್ತು. 


ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಸೇರಿದಂತೆ ಪಕ್ಷದ ಹಲವು ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. 
ಈ ಇಬ್ಬರು ನಾಯಕರು ನೇತೃತ್ವದ ಎರಡು ಬಣಗಳ  ಆಗಸ್ಟ್ 21 ರಂದು ವಿಲೀನಗೊಂದಿದ್ದವು. ವಿಲೀನದ ನಂತರ ನಡೆದ ಮೊದಲ ಸಭೆ ಇದಾಗಿತ್ತು.


ಅದಾದರೂ, ಈ 18 ಶಾಸಕರು ದಿನಕರನ್ ಅವರೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಸಭೆ ನಡೆಸಲು ಅವರು ಒತ್ತಾಯಿಸುತ್ತಿದ್ದರು. ಈ ಕಾರಣದಿಂದಾಗಿ ಬಂಡಾಯ ಶಾಸಕರನ್ನು ವಜಾ ಮಾಡಲಾಗಿದೆ.