ನವದೆಹಲಿ: ನೂತನವಾಗಿ ಮಧ್ಯಪ್ರದೇಶದ ವಿಧಾನಸಭೆಗೆ ಆಯ್ಕೆಯಾಗಿರುವ 230 ಶಾಸಕರಲ್ಲಿ ಒಟ್ಟು187 ಶಾಸಕರು ಕೊಟ್ಯಾಧಿಪತಿಗಳಾಗಿದ್ದಾರೆ ಎಂದು ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ​​ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ಸಮೀಕ್ಷೆ ತಿಳಿಸಿದೆ. ಇದರಲ್ಲಿ ಶೇ 41 ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಕೇಸ್ಗಳಿವೆ ಎಂದು ವರದಿ ಹೇಳಿದೆ.


COMMERCIAL BREAK
SCROLL TO CONTINUE READING

ಪಕ್ಷವಾರು ಈ ವರದಿಯನ್ನು ವಿಶ್ಲೇಷಿಸಿದಾಗ 109 ಬಿಜೆಪಿ ಶಾಸಕರಲ್ಲಿ 91( ಶೇ.84), ಕಾಂಗ್ರೆಸಿನ 114 ರಲ್ಲಿ 90(ಶೇ 79) ಬಿಎಸ್ಪಿ ಇಬ್ಬರು ಶಾಸಕರಲ್ಲಿ ಒಬ್ಬ ಶಾಸಕ,ಸಮಾಜವಾದಿಯಿಂದ ಒಬ್ಬ ಶಾಸಕ,ನಾಲ್ಕು ಸ್ವತಂತ್ರ ಶಾಸಕರು ತಮ್ಮ ಆಸ್ತಿ ವಿವರನ್ನು ಒಂದು ಕೋಟಿಗೂ ಅಧಿಕ ಎಂದು ಘೋಷಿಸಿದ್ದಾರೆ.


ಮಧ್ಯಪ್ರದೇಶದ 2018 ರ ವಿಧಾನಸಭೆ ಚುನಾವಣೆಯಲ್ಲಿ ಸರಾಸರಿ ಶೇಕಡಾ 10.17 ಕೋಟಿ ಶಾಸಕರ ಆಸ್ತಿಯಾಗಿದೆ.ಅದು  2013 ರಲ್ಲಿ 5.24 ಕೋಟಿ ರೂ.ಗಳಷ್ಟಿತ್ತು ಎಂದು ವರದಿ ತಿಳಿಸಿದೆ.114 ಕಾಂಗ್ರೆಸ್ ಶಾಸಕರ ಸರಾಸರಿ ಆಸ್ತಿ 9.41 ಕೋಟಿ, 109 ಬಿಜೆಪಿ ಶಾಸಕರ ಸರಾಸರಿ ಆಸ್ತಿ 11.16 ಕೋಟಿ ಮತ್ತು 4 ಸ್ವತಂತ್ರ ಶಾಸಕರ ಸರಾಸರಿ 9.24 ಕೋಟಿ ರೂ. ಎಂದು ವರದಿ ತಿಳಿಸಿದೆ 


ವಿಜಯ್ ರಾಘವ್ ಗಡ್ ಕ್ಷೇತ್ರದಿಂದ ಬಿಜೆಪಿಯ ಸಂಜಯ್ ಸತ್ಯೇಂದ್ರ ಪಾಠಕ್ ಅವರು 226 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಳ್ಳುವ ಮೂಲಕ ಅತಿ ಹೆಚ್ಚು ಅಸ್ತಿಯನ್ನು ಘೋಷಿಸಿಕೊಂಡ ಶಾಸಕರಾಗಿದ್ದಾರೆ .ಮತ್ತೊಂದೆಡೆ, ಪಾಂಡಾನ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ಡಾಂಗೋರ್ ಅವರು  50,749 ಮೌಲ್ಯದ ಅಸ್ತಿಯನ್ನು ಘೋಷಿಸಿಕೊಳ್ಳುವ ಮೂಲಕ ಕನಿಷ್ಠ  ಆಸ್ತಿಯನ್ನು ಹೊಂದಿದವರಾಗಿದ್ದಾರೆ.