ನವದೆಹಲಿ:  ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪ್ರಧಾನಿಯನ್ನು ದಕ್ಷಿಣ ಭಾರತದಿಂದಲೇ ಆಯ್ಕೆ ಮಾಡುವ ನಿಟ್ಟಿನಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ದಕ್ಷಿಣ ಭಾರತದ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ.ಆ ನಿಟ್ಟಿನಲ್ಲಿ ಈಗ ಸರಣಿ ಸಭೆಯಗಳನ್ನು ಪ್ರಮುಖ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಇದರ ಭಾಗವಾಗಿ ಕೆಸಿಆರ್ ಸೋಮವಾರದಂದು ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಅವರನ್ನು ಭೇಟಿಯಾಗಿದ್ದು, ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸೇತರ ಫೆಡರಲ್ ಒಕ್ಕೂಟ ರಚನೆಯನ್ನು  ಚುನಾವಣೆಯ ನಂತರ 1996 ರ ಸೂತ್ರದ ಪ್ರಕಾರ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಕಳೆದ ಕೆಲವು ವರ್ಷಗಳಿಂದ ಕೆಸಿಆರ್ ಫೆಡರಲ್ ಒಕ್ಕೂಟದ ರಚನೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದು. ಈಗ ಲೋಕಸಭಾ ಚುನಾವಣೆಯ ಎರಡು ಹಂತಗಳು ಬಾಕಿ ಇರುವ ಹಿನ್ನಲೆಯಲ್ಲಿ ಒಕ್ಕೂಟ ರಚನೆ ಯತ್ನಕ್ಕೆ ಈಗಲೇ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಡಿಎಂಕೆ ಮುಖಂಡ ಎಂ.ಕೆ ಸ್ಟಾಲಿನ್ ಅವರನ್ನು ಮೇ 13 ರಂದು ಭೇಟಿ ಮಾಡಲಿದ್ದಾರೆ. ಮೇ 23ಕ್ಕೆ ಅಂತಿಮ ಫಲಿತಾಂಶ ಘೋಷಣೆಯಾಗುವ ಹಿನ್ನಲೆಯಲ್ಲಿ ಇದಕ್ಕೂ ಮೊದಲು ಸರಣಿ ಸಭೆಗಳ ಮೂಲಕ ಪ್ರಾದೇಶಿಕ ನಾಯಕರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಕೆಸಿಆರ್ ಮುಂದಾಗಿದ್ದಾರೆ.


ಕೇರಳದಲ್ಲಿ ಎಡಪಕ್ಷದ ಸರ್ಕಾರವನ್ನು ಮುನ್ನಡೆಸುತ್ತಿರುವ ಪಿನಾರೈ ವಿಜಯನ್ ಅವರೊಂದಿಗಿನ ಸಭೆಯಲ್ಲಿ ದಕ್ಷಿಣ ಭಾರತದಿಂದ ಪ್ರಧಾನಿಯಾಗುವುದಕ್ಕೆ ಆಧ್ಯತೆ ನೀಡಲು ತಿಳಿಸಿದ್ದಾರೆ. ಆದರೆ ಅವರು ಅಧಿಕೃತವಾಗಿ ಯಾವುದೇ ಹೆಸರು ಪ್ರಸ್ತಾಪಿಸಿಲ್ಲ ಎನ್ನಲಾಗಿದೆ.1996 ರಲ್ಲಿನ ಸೂತ್ರದ ಅನುಗುಣವಾಗಿ ರಚನೆಯಾದ ಸರ್ಕಾರಗಳು ದೀರ್ಘಾವಧಿವರೆಗೆ ಅಧಿಕಾರ ಪೋರೈಸಿರಲಿಲ್ಲ.ಈ ಅವಧಿಯಲ್ಲಿ ಮೂರು ಪ್ರಧಾನಿಗಳು ಅಧಿಕಾರವಹಿಸಿಕೊಂಡಿದ್ದರು.