ಮುಂಬೈ: ಮಹಾರಾಷ್ಟ್ರದಲ್ಲಿ 12 ಗಂಟೆಗಳಲ್ಲಿ ಸತತ ಎರಡನೇ ಬಾರಿಗೆ ಭೂಕಂಪ ಸಂಭವಿಸಿದೆ. ಉತ್ತರ ಮುಂಬೈನಲ್ಲಿ ಶನಿವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ. ಇದರಿಂದಾಗಿ ಗಾಬರಿಗೊಂಡ  ಜನರು ಮನೆಗಳಿಂದ ಹೊರಬಂದಿರುವ ಘಟನೆ ನಡೆದಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 2.7 ಎಂದು ಅಳೆಯಲಾಯಿತು. 


COMMERCIAL BREAK
SCROLL TO CONTINUE READING

ಈ ಮೊದಲು ಮಹಾರಾಷ್ಟ್ರದ ನಾಸಿಕ್‌ನಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಎರಡು ಭೂಕಂಪದ (Earthquake) ಆಘಾತಗಳು ಸಂಭವಿಸಿವೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯನ್ನು ಅಳೆಯಲಾಯಿತು. ಸತತ ಎರಡು ಭೂಕಂಪ ಕಂಪನಗಳು ನಾಸಿಕ್ ಜನರನ್ನು ಭಯಭೀತಿಗೊಳಿಸಿತ್ತು.


ಈ ಮೊದಲು ಮಹಾರಾಷ್ಟ್ರದ ನಾಸಿಕ್‌ನಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಎರಡು ಭೂಕಂಪದ ಆಘಾತಗಳು ಸಂಭವಿಸಿವೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯನ್ನು 4 ರಷ್ಟಿದೆ. ಕಳೆದ 12 ಗಂಟೆಗಳಲ್ಲಿ ಸತತ 3 ಭೂಕಂಪನವು ಮಹಾರಾಷ್ಟ್ರದ ಜನರನ್ನು ಹೆದರಿಸಿದೆ. 


ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಕಳೆದ ತಿಂಗಳು ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಸೌಮ್ಯ ನಡುಕ ಉಂಟಾಗಿದೆ. ಅದರ ತೀವ್ರತೆಯನ್ನು 2.8ರಷ್ಟಿತ್ತು ಎನ್ನಲಾಗಿದೆ. ಆದಾಗ್ಯೂ ಆ ಭೂಕಂಪದಲ್ಲಿ ಯಾವುದೇ ಸಾವುನೋವು ಅಥವಾ ಹಾನಿ ಸಂಭವಿಸಿಲ್ಲ.


ಮುಂಬೈನಲ್ಲಿ ಭೂಕಂಪದ ನಂತರ ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ಮೇಮ್ಸ್ ಮತ್ತು ಕಾಮೆಂಟ್ಗಳ ಮಹಾಪೂರವೇ ಹರಿದು ಬರುತ್ತದೆ. ನಾನು ಇಲ್ಲಿ ಬದುಕುಳಿಯುವುದಿಲ್ಲ ಎಂದು ಬಳಕೆದಾರರ ಸಾಹಿಲ್ ಚಿತ್ರದ ಹಾಕುವ ಮೂಲಕ ಪ್ರತಿಕ್ರಿಯಿಸಿದ್ದಾರೆ.