ಇಂದಿನಿಂದ ರಾಷ್ಟ್ರಪತಿ ಭವನದಲ್ಲಿ 2 ದಿನಗಳ ರಾಜ್ಯಪಾಲರ ಸಮ್ಮೇಳನಕ್ಕೆ ಚಾಲನೆ
ನವದೆಹಲಿ: ಇಂದಿನಿಂದ ರಾಜ್ಯಪಾಲರ ಸಮ್ಮೇಳನ ರಾಷ್ಟ್ರಪತಿ ಭವನದಲ್ಲಿ ಪ್ರಾರಂಭವಾಯಿತು.
ಈ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ರಾಜ್ಯಪಾಲರು ಹಾಗೂ ಲೆಫ್ಟಿನೆಂಟ್ ಗವರ್ನರ್ ಭಾಗವಹಿಸಿದ್ದರು.ಕಾರ್ಯಕ್ರಮವು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಪ್ರಧಾನಿ ನರೇಂದ್ರ ಮೋದಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಮ್ಮೇಳನದಲ್ಲಿ ದೇಶ ಮತ್ತು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಮೊದಲ ರಾಜ್ಯಪಾಲರ ಸಮ್ಮೇಳನವು 1949ರಲ್ಲಿ ಸಿ.ರಾಜಗೋಪಾಲಚಾರಿಯವರ ಅಧ್ಯಕ್ಷತೆಯಲ್ಲಿ ನಡೆದಿತ್ತು ಅದಾದ ನಂತರ ಈಗ ನಡೆಯುತ್ತಿರುವುದು 49 ನೆ ಸಮ್ಮೇಳನವಾಗಿದೆ.ಸಮ್ಮೇಳನದ ವಿವಿಧ ಅಧಿವೇಶನಗಳಲ್ಲಿ ರಾಜ್ಯಪಾಲರು ದೇಶದ ಆಂತರಿಕ ಭದ್ರತೆ,ಉನ್ನತ ಶಿಕ್ಷಣ ಕೌಶಲ್ಯ ಅಭಿವೃದ್ದಿ.ಉದ್ಯೋಗದ ಕುರಿತಾಗಿ ಚರ್ಚೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಗೃಹ ಸಚಿವರು ಮಾನವ ಸಂಪನ್ಮೂಲ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಸಂಸ್ಕೃತಿ ಮತ್ತು ಉಪಾಧ್ಯಕ್ಷ ಮತ್ತು ಸಿಇಒ ಎನ್ಐಟಿಐ ಮತ್ತು ವಿವಿಧ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳ ಸಚಿವಾಲಯದ ರಾಜ್ಯ ಸಚಿವ ಸಹ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ.