ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ (PM Narendra Modi)ಇಂದು (ಮಂಗಳವಾರ) ಮಣಿಪುರದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ  (Election Rally) ಮಾತನಾಡಲಿದ್ದಾರೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ (Manipur Election). ಆದರೆ ಈ ಮಧ್ಯೆ, ಪ್ರಧಾನಿ ಮೋದಿ ಭೇಟಿಗೂ ಮುನ್ನ ಮಣಿಪುರದ ಕಾಂಗ್‌ಪೋಕ್ಪಿ ಬಳಿಯ ಪ್ರದೇಶದಿಂದ ಐಇಡಿ (IED)ಹೊಂದಿರುವ ಇಬ್ಬರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ (Terrorist Arrest).


COMMERCIAL BREAK
SCROLL TO CONTINUE READING

ಅಪಾಯಕಾರಿ ಯೋಜನೆ ರೂಪಿಸಿದ ಉಗ್ರರು :
ಚುನಾವಣೆ ನಿಮಿತ್ತ ರಾಜ್ಯದಲ್ಲಿ ವಿವಿಐಪಿ ಮೂವ್ಮೆಂಟ್ ನಡೆಯುತ್ತಿದ್ದ ವೇಳೆ ಉಗ್ರರು  ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ (Terrorist arrest). ಇಂಫಾಲದಿಂದ ಕಾಂಗ್‌ಪೋಕ್ಪಿಗೆ ಹೋಗುವ ಮಾರ್ಗದಲ್ಲಿ ವಿವಿಐಪಿ ಬೆಂಗಾವಲು ಪಡೆಯನ್ನು ಸ್ಫೋಟಿಸಲು ಸಂಚು ರೂಪಿಸಲಾಗಿತ್ತು.


ಇದನ್ನೂ ಓದಿ :  Dark Web:ಕಪ್ಪು ವ್ಯವಹಾರಗಳ ಗುಹೆಯಾಗಿರುವ ಇಂಟರ್ನೆಟ್ ಜಗತ್ತು! ಡಾರ್ಕ್ ವೆಬ್ ಬಗ್ಗೆ ನಿಮಗೆಷ್ಟು ಗೊತ್ತು?


ಉಗ್ರರ ಟಾರ್ಗೆಟ್ ಯಾರು?
ಬಂಧಿತ ಇಬ್ಬರೂ ಭಯೋತ್ಪಾದಕರು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (National Socialist Council Of Nagaland)ಎಂಬ ಪ್ರತ್ಯೇಕತಾವಾದಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾರೆ.  ಪೊಲೀಸ್ ತಂಡವು ಇಬ್ಬರೂ ಭಯೋತ್ಪಾದಕರ (Terrorist)ವಿಚಾರಣೆ ನಡೆಸುತ್ತಿದ್ದು, ಅವರು ಯಾರನ್ನು ಗುರಿಯಾಗಿಸಲು ಹೊರಟಿದ್ದರು ಎನ್ನುವ ಅಂಶವನ್ನು ತಿಳಿಯುವ ಪ್ರಯತ್ನ ನಡೆಯುತ್ತಿದೆ. 


ಪೊಲೀಸ್ ಠಾಣೆ ಮೇಲೆ ದಾಳಿ :
ಪೊಲೀಸರು ಇಬ್ಬರನ್ನೂ ಬಂಧಿಸಿ ಸೆಕ್ಮಾಯಿ ಠಾಣೆಗೆ ಕರೆತಂದಾಗ, ಅವರ ಬೆಂಬಲಿಗರು ರಾತ್ರಿ ಪೊಲೀಸ್ ಠಾಣೆ (Police station)ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಅಶ್ರುವಾಯು  ಸಿಡಿಸಿದ್ದಾರೆ.  ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. 


ಇದನ್ನೂ ಓದಿ :  ಕಣ್ಮುಂದೆ ಮಾಯವಾದ ಮುಚ್ಚಳ! 9 ರಲ್ಲಿ 1 ಹೇಗೆ ಕಣ್ಮರೆಯಾಯಿತು? ಇಲ್ಲಿದೆ ಉತ್ತರ


ಮಣಿಪುರದಲ್ಲಿ ಮೊದಲ  ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ವಿಧಾನಸಭೆ ಚುನಾವಣೆ ನಡೆಯಬೇಕಿತ್ತು (Manipur Election 2022). ಆದರೆ ನಂತರ ಚುನಾವಣಾ ಆಯೋಗವು ಮತದಾನದ ದಿನಾಂಕವನ್ನು ಬದಲಾಯಿಸಿದ ಹಿನ್ನೆಲೆಯಲ್ಲಿ ಇದೀಗ ಮಣಿಪುರ ವಿಧಾನಸಭೆ ಚುನಾವಣೆಗೆ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಮತದಾನ ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.