VIDEO: 110 ಗಂಟೆಗಳ ಕಾರ್ಯಾಚರಣೆ ಬಳಿಕ 150 ಅಡಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ರಕ್ಷಣೆ
ಎನ್.ಡಿ.ಆರ್.ಎಫ್. ತಂಡ ಸತತ 110 ಗಂಟೆಗಳ ಕಾರ್ಯಾಚರಣೆ ಬಳಿಕ ಇಂದು ಬೆಳಿಗ್ಗೆ 5:30ರ ವೇಳೆಗೆ ಮಗುವನ್ನು ಕೊಳವೆ ಬಾವಿಯಿಂದ ಹೊರಗೆ ತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರೂರ್ (ಪಂಜಾಬ್): ಪಂಜಾಬಿನ ಸಂಗ್ರೂರ್ ಜಿಲ್ಲೆಯಲ್ಲಿ 150 ಅಡಿ ಆಳದ ಕೊಳವೆ ಬಾವಿಯಲ್ಲಿ ಜೂನ್ 6 ರಂದು ಬಿದ್ದಿದ್ದ ಎರಡು ವರ್ಷದ ಮಗು ಫತೇವಿರ್ ಸಿಂಗ್ ಅವರನ್ನು ಸತತ 110 ಗಂಟೆಗಳ ಕಾರ್ಯಾಚರಣೆ ಬಳಿಕ ಇಂದು ಬೆಳಿಗ್ಗೆ 5:30ರ ವೇಳೆಗೆ ಹೊರತೆಗೆದು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗುವನ್ನು ಕೊಳವೆ ಬಾವಿಯಿಂದ ಹೊರತೆಗೆಯುತ್ತಿದ್ದಂತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಂಬ್ಯುಲೆನ್ಸ್ ನಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎನ್.ಡಿ.ಆರ್.ಎಫ್. ತಂಡ ಸತತ 110 ಗಂಟೆಗಳ ಕಾರ್ಯಾಚರಣೆ ಬಳಿಕ ಇಂದು ಬೆಳಿಗ್ಗೆ 5:30ರ ವೇಳೆಗೆ ಮಗುವನ್ನು ಕೊಳವೆ ಬಾವಿಯಿಂದ ಹೊರಗೆ ತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫತೇವಿರ್ ಸಿಂಗ್ ಗೆ ವೈದ್ಯಕೀಯ ಸೇವೆಗಾಗಿ ವೈದ್ಯರ ತಂಡ ಸ್ಥಳದಲ್ಲೇ ಹಾಜರಿದ್ದರು. ವೆಂಟಿಲೇಟರ್ ಸೌಲಭ್ಯವೂ ಕೂಡ ಅಂಬ್ಯುಲೆನ್ಸ್ ನಲ್ಲಿ ಲಭ್ಯವಿತ್ತು ಎನ್ನಲಾಗಿದೆ.
ಫತೇವೀರ್ ಸಿಂಗ್ ಭವಾವಾನ್ಪುರ ಗ್ರಾಮದ ತನ್ನ ಮನೆಯಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಸಂಜೆ 4 ಗಂಟೆಯ ಹೊತ್ತಿಗೆ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ. ಬಳಿಕ ಮಗುವನ್ನು ರಕ್ಷಿಸಲು ರಕ್ಷಣಾ ತಂಡ ನಿರಂತರ ಕಾರ್ಯಾಚರಣೆ ನಡೆಸಿತ್ತು. ಮಗು ಇರುವ ಸ್ಥಳಕ್ಕೆ ಆಮ್ಲಜನಕ ಒದಗಿಸಲು ಅಧಿಕಾರಿಗಳು ಯಶಸ್ವಿಯಾದರು. ಆದರೂ ಎರಡು ವರ್ಷದ ಮಗುವಿಗೆ ಸತತ 110 ಗಂಟೆ ನೀರು ಆಹಾರ ಒದಗಿಸಲು ಸಾಧ್ಯವಾಗಲಿಲ್ಲ.