ಇಂದೋರ್: ಮಧ್ಯಪ್ರದೇಶದ ಇಂದೋರ್ ಮೂಲದ ಪ್ರಾಥಮಿಕ ಶಾಲೆಯೊಂದರಲ್ಲಿ ಬೆಳಗಿನ ಉಪಹಾರ ಸೇವಿಸಿದ ಬಳಿಕ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಬುಧವಾರ ಬೆಳಗಿನ ಉಪಹಾರಕ್ಕಾಗಿ ಶಾಲೆಯಲ್ಲಿ ಪಾವ್ ಭಾಜಿ ನೀಡಲಾಗಿತ್ತು. ಆದರೆ, ಅದನ್ನು ಸೇವಿಸಿದ ಬಳಿಕ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಶಾಲಾ ಆಡಳಿತ ಕಲುಷಿತ ನೀರು ಬಳಸಿ ಆಹಾರ ತಯಾರಿಸಿದ್ದರಿಂದಲೇ ಮಕ್ಕಳು ಅಸ್ವಸ್ಥರಾಗಿ ನಂತರ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.


"ನಮಗೆ ನೀಡಿದ ಬ್ರೆಡ್ ನಿಂದ ಕೆಟ್ಟ ವಾಸನೆ ಬರುತ್ತಿತ್ತು. ಆ ಪಾವ್ ಭಾಜಿಯನ್ನು ತಿಂದ ಕೆಲ ಸಮಯದ ಬಳಿಕ ವಾಂತಿ ಮಾಡಿಕೊಂಡೆ. ಕೂಡಲೇ ನನ್ನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತರಲಾಯಿತು" ಎಂದು ತುಷಾರ್ ಎಂಬ ವಿದ್ಯಾರ್ಥಿ ಹೇಳಿದ್ದಾರೆ.


"ಹೊಟ್ಟೆ ನೋವು ಮತ್ತು ವಾಂತಿ ಬಗ್ಗೆ ದೂರು ನೀಡಿದ ನಂತರ ಎಲ್ಲಾ 20 ಮಕ್ಕಳನ್ನು ಕೂಡಲೇ ಬಟ್ಟೆ ಮಾರುಕಟ್ಟೆ ಆಸ್ಪತ್ರೆಗೆ ದಾಖಲಿಸಲಾಯಿತು. 20ರಲ್ಲಿ 19 ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಓರ್ವ ವಿದ್ಯಾರ್ಥಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು" ಎಂದು ಗಿರಧಾರಿ ಗೋಪಾಲ್ ನಗರ ವೈಷ್ಣೋ ಶಾಲೆಯ ಟ್ರಸ್ಟಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.