ನವದೆಹಲಿ: ಪ್ರಾದೇಶಿಕ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ತೃತೀಯ ರಂಗದ ವೇದಿಕೆಯನ್ನು ನಿರ್ಮಿಸಿಕೊಳ್ಳುತ್ತಿರುವದಕ್ಕೆ ಪ್ರತಿಕ್ರಿಯಿಸಿರುವ ಅರುಣ ಜೈಟ್ಲಿ  ಈ ಎಲ್ಲ ಮೈತ್ರಿ ಬಣಗಳ ಒಗ್ಗೂಡುವಿಕೆಯನ್ನು ಅರಾಜಕತಾ ಬಣ ಎಂದು ವ್ಯಾಖಾನಿಸಿದ್ದಾರೆ.ಮುಂಬರುವ 2019ರ ಲೋಕಸಭಾ ಚುನಾವಣೆಯು ಮೋದಿ vs ಅರಾಜಕತಾ ಬಣಗಳ ನಡುವೆ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

"ಬಹುತೇಕ ನಾಯಕರು ತಾತ್ಕಾಲಿಕ ಅವರು ಆಗಾಗ ಅಧಿಕಾರಕ್ಕಾಗಿ ತಮ್ಮ ಸೈದ್ದಾಂತಿಕ ನಿಲುವುಗಳನ್ನು ಬದಲಿಸುತ್ತಲೇ ಇರುತ್ತಾರೆ.ಅದರಲ್ಲಿ ಪ್ರಮುಖವಾಗಿ ಟಿಎಂಸಿ, ಡಿಎಂಕೆ, ಟಿಡಿಪಿ, ಬಿಎಸ್ಪಿ,ಜೆಡಿಎಸ್,ಆದ್ದರಿಂದ ಮುಂಬರುವ 2019 ರ ಚುನಾವಣೆ ಮೋದಿ vs ಅರಾಜಕತಾ ಬಣದ ನಡುವೆ" ಎಂದು ಜೈಟ್ಲಿ ತಿಳಿಸಿದರು. 


 ಇತ್ತೀಚಿಗೆ ಕರ್ನಾಟಕದಿಂದ ಹಿಡಿದೂ ಉತ್ತರ ಪ್ರದೇಶದವರೆಗೆ ಮುಂಬರುವ  ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸುವ ನಿಟ್ಟಿನಲ್ಲಿ ಈ ಎಲ್ಲ ಪಕ್ಷಗಳು ಈಗ ರಣತಂತ್ರ ರೂಪಿಸುತ್ತಿರುವ  ಹಿನ್ನಲೆಯಲ್ಲಿ ಜೈಟ್ಲಿಯವರ ಹೇಳಿಕೆಯು ಬಂದಿದೆ.