ನವದೆಹಲಿ: ಕಳೆದ 18 ದಿನಗಳಲ್ಲಿ 21 ಸಿಂಹಗಳು ಗಿರ್ ಅರಣ್ಯದಲ್ಲಿ ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಈಗ ಇಂತಹ ಅಲ್ಪ ಅವಧಿಯಲ್ಲಿ ಸಿಂಹಗಳು ಸಾವನ್ನಪ್ಪುತ್ತಿರುವುದು ಈಗ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳಲ್ಲಿ ಚಿಂತೆಗೀಡು ಮಾಡಿದೆ.


COMMERCIAL BREAK
SCROLL TO CONTINUE READING

ಅರಣ್ಯ ಇಲಾಖೆ ಹೇಳುವಂತೆ ಒಳ ಜಗಳ ಮತ್ತು ಯಕೃತ್ತು ಮತ್ತು ಮೂತ್ರಪಿಂಡಗಳಲ್ಲಿನ ಸೋಂಕು ಸಿಂಹಗಳ ಸಾವಿಗೆ ಪ್ರಮುಖ ಕಾರಣ ಎಂದು ಹೇಳಿದೆ.ಈಗ ಸಿಂಹಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸುಮಾರು 31 ಸಿಂಹಗಳನ್ನು ಪ್ರಾಣಿ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.


"ಇತರ ಯಾವುದೇ ಪ್ರದೇಶದಲ್ಲಿ ಸಿಂಹಗಳು ಸಿಕ್ಕಿಲ್ಲ, ಸಮಾರ್ದಿ ಪ್ರದೇಶದಿಂದ 31 ಸಿಂಹಗಳನ್ನು ರಕ್ಷಿಸಲಾಗಿದೆ ಮತ್ತು ಅವುಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ, ಅಲ್ಲಿ ಅವುಗಳನ್ನು ರಕ್ಷಿಸುವ ಎಲ್ಲ  ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಜುನಾಗಡ್ ನ  ಹಿರಿಯ  ಅರಣ್ಯ ಸಂರಕ್ಷಣಾಧಿಕಾರಿ ದುಶ್ಯಂತ್ ವಾಸ್ವಾಡಾ ಹೇಳಿದರು. 



ಮಾನ್ಸೂನ್ ಸಮಯದಲ್ಲಿ ಸಿಂಹಗಳ ಮರಣ ಪ್ರಮಾಣವು ಹೆಚ್ಚಾಗುತ್ತಿದ್ದು ಪ್ರತಿ ವರ್ಷ ಸುಮಾರು 100 ಸಿಂಹಗಳು ಸಾಯುತ್ತವೆ. ಪ್ರತಿ ವರ್ಷ ಮಾನ್ಸೂನ್ ಮೂರು ತಿಂಗಳ ಅವಧಿಯಲ್ಲಿ ಗಿರ್ನಲ್ಲಿ 31 ರಿಂದ 32 ಸಿಂಹಗಳು ಸಾಯುತ್ತವೆ ಎಂದು ಅರಣ್ಯ ಇಲಾಖೆ ಹೇಳಿದೆ.


2015 ರಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಗಿರ್ 523 ಸಿಂಹಗಳಿಗೆ ನೆಲೆಯಾಗಿದೆ, ಇದರಲ್ಲಿ 109 ಗಂಡು , 201 ಹೆಣ್ಣು , 73 ಮಧ್ಯ ವಯಸ್ಕರು ಮತ್ತು 140 ಮರಿಗಳಿವೆ ಎಂದು  ತಿಳಿದು ಬಂದಿದೆ.


1,400 ಚದರ ಕಿಲೋಮೀಟರ್ ಹೊಂದಿರುವ ಈ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ  ರಸ್ತೆಗಳು, ಹಳ್ಳಿ ಮತ್ತು ಅಕ್ರಮ ಗಣಿಗಾರಿಕೆಯನ್ನು ವಿಸ್ತರಿಸುವುದು - ಪ್ರಾಣಿ-ಮಾನವ ಸಾಮೀಪ್ಯವನ್ನು ಹೆಚ್ಚಿಸುವಂತೆ ಮಾಡಿದೆ.