ನವದೆಹಲಿ: ದೆಹಲಿಯ ಲೈಫ್ಲೈನ್ನ ದಿನನಿತ್ಯದ ಜೀವನವು ಅಪಾಯದಿಂದ ಕೂಡಿದೆ ಮತ್ತು ಆಡಳಿತದ ನಿರ್ಲಕ್ಷ್ಯವು ಮುಂದುವರೆದಿದೆ. ಅಂತಹದ್ದೇ ಒಂದು ವಿಡಿಯೋ ದೆಹಲಿ ಮೆಟ್ರೋ ನಿಲ್ದಾಣದಿಂದ ಬಹಿರಂಗವಾಗಿದೆ. ಅದು ಆಡಳಿತದ ದೊಡ್ಡ ನಿರ್ಲಕ್ಷ್ಯವನ್ನು ಬಿಂಬಿಸುತ್ತಿದೆ. ಈ ಘಟನೆ ಮೇ. 22 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಶಾಸ್ತ್ರಿ ನಗರ ಮೆಟ್ರೋ ನಿಲ್ದಾಣದ ರೆಡ್ ಲೈನ್ ನಲ್ಲಿ ನಡೆದಿದೆ. ಮಯೂರ್ ಪಟೇಲ್ ಎಂಬ 21 ವರ್ಷದ ಯುವಕ ಅಪಾಯದ ಮುನ್ಸೂಚನೆ ಇಲ್ಲದೆ ಟ್ರ್ಯಾಕ್‌ನಲ್ಲಿ ಪ್ಲ್ರಾಟ್‌ ಫಾರ್ಮ್ ದಾಟಲು ಮುಂದಾದ ಯುವಕನೊಬ್ಬನ ಪ್ರಾಣ ಚಾಲಕನ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.


COMMERCIAL BREAK
SCROLL TO CONTINUE READING

ಮೊದಲ ಬಾರಿಗೆ ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದ ಯುವಕ 
ಈ ಘಟನೆ ಮೇ. 22 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಶಾಸ್ತ್ರಿ ನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮಯೂರ್ ಪಟೇಲ್ ಎಂಬ 21 ವರ್ಷದ ಯುವಕ ರೋಹಿಣಿಗೆ ಹೋಗಬೇಕಿತ್ತು. ಆದರೆ ಆತ ಆಕಸ್ಮಿಕವಾಗಿ ಕಾಶ್ಮೀರಿ ಗೇಟ್ ಗೆ ಸಾಗುವ ಪ್ಲಾಟ್ ಫಾರ್ಮ್ ತಲುಪಿದ್ದ. ಕಾಶ್ಮೀರಿ ಗೇಟ್ ಸೈಡ್ ಪ್ಲಾಟ್ಫಾರ್ಮ್ನ ಬದಿಯಲ್ಲಿ, ರೋಹಿಣಿ ಗೆ ಸಾಗುವ ಮೆಟ್ರೋ ಲೈನ್ ಬಗ್ಗೆ ಕೆಲವು ಮಾಹಿತಿಯನ್ನು ಪಡೆದು, ಓವರ್‌ಬ್ರಿಡ್ಜ್ ಬಳಕೆ ಮಾಡಲೆ ಟ್ರ್ಯಾಕ್‌ ಮೂಲಕವೇ ಫ್ಲ್ಯಾಟ್‌ ಫಾರಂ ಬದಲಾಯಿಸಲು ಮುಂದಾಗಿದ್ದ. ಈ ವೇಳೆ ನಿಂತಿದ್ದ ಮೆಟ್ರೋ ಚಲಿಸಲಾರಂಭಿಸಿದೆ. ಮೆಟ್ರೋ ಚಾಲಕ ಸಮಯ ಪ್ರಜ್ಞೆ ಮೆರೆದು ಒಂದು ವೇಳೆ ಬ್ರೇಕ್ ಹಾಕದೆ ಹೊಗಿದ್ದಲ್ಲಿ  ಯುವಕನ ಪ್ರಾಣ ಪಕ್ಷಿ ಕ್ಷಣ ಮಾತ್ರದಲ್ಲಿ ಹಾರಿ ಹೋಗುತ್ತಿತ್ತು. ಆ ಯುವಕ ಮೊದಲ ಬಾರಿಗೆ ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದ ಎಂದು ಹೇಳಲಾಗಿದೆ.