ಮುಂಬೈ: ಸೋಮವಾರ ಸಂಜೆಯಿಂದ ಮುಂಬೈಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ವಿಮಾನ ಮತ್ತು ಸ್ಥಳೀಯ ರೈಲು ಸೇವೆಗಳಿಗೆ ತೊಡಕುಂಟಾಗಿದೆ. ಮುಂಬೈ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಯ ಪ್ರಕಾರ, ಕನಿಷ್ಠ 22 ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ದೆಹಲಿ, ಹೈದರಾಬಾದ್ ಮತ್ತು ಅಹಮದಾಬಾದ್ಗಳಲ್ಲಿ ಆರು ಅಂತಾರಾಷ್ಟ್ರೀಯ ಮತ್ತು 16 ದೇಶೀಯ ವಿಮಾನಗಳ ಮಾರ್ಗ ಬದಲಿಸಲಾಗಿದೆ.


COMMERCIAL BREAK
SCROLL TO CONTINUE READING

ಮುಂಬಯಿ ಮತ್ತು ಉಪನಗರ ಪ್ರದೇಶಗಳಲ್ಲಿ ಸುರಿದ ಮುಂಗಾರು ಪೂರ್ವ ಭಾರೀ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ಬಳಲಿದ್ದ ಜನತೆಗೆ ಸ್ವಲ್ಪ ಮಟ್ಟಿಗೆ ಸಹಾಯವಾಯಿತಾದರೂ, ಸಂಚಾರ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಸ್ಥಳೀಯ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. 


ದಕ್ಷಿಣ ಮುಂಬೈನಲ್ಲಿನ ಕೋಲಾಬಾ, ಸ್ಯಾಂಟಕ್ರೂಜ್, ಮಲಾಡ್, ಕಂಡಿವಲಿ ಮತ್ತು ಬೊರಿವಲಿ ಪಶ್ಚಿಮದ ಉಪನಗರಗಳಾದ ಕುರ್ಲಾ, ಘಾಟ್ಕೋಪರ್ ಮತ್ತು ವಿಕ್ರೊಲಿಯಂತಹ ಪ್ರದೇಶಗಳು ಗುಡುಗು ಮತ್ತು ಮಿಂಚಿನಿಂದ ಕೂಡಿದ ಭಾರೀ ಮಳೆಗೆ ಸಾಕ್ಷಿಯಾಗಿವೆ.


ಇದು ದಕ್ಷಿಣ ಮುಂಬೈ ಪ್ರದೇಶದಲ್ಲಿ ಮೊದಲ ಮುನ್ಸೂಚಕ ಮಳೆಯಾಗಿದೆ. ಗಮನಾರ್ಹವಾಗಿ, ನಗರದ ಪೂರ್ವ ಭಾಗಗಳಲ್ಲಿ ಈಗಾಗಲೇ ಗುಡುಗು ಮತ್ತು ಮಿಂಚಿನಿಂದ ಕೂಡಿದ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ದೃಢಪಡಿಸಿದರು.