ಗಯಾ: ಬಿಹಾರದ ಗಯಾ ಜಿಲ್ಲೆಯ ಆಟ್ರಿ ಬ್ಲಾಕ್ನಲ್ಲಿ ಒಂದೇ ಕುಟುಂಬದ 22 ಸದಸ್ಯರ 24 ಬೆರಳುಗಳಿವೆ. ಕುಟುಂಬ ಸದಸ್ಯರಿಗೆ ಇದರಿಂದ ತೊಂದರೆಯಾಗುತ್ತಿದ್ದು, ಅದರಲ್ಲೂ ವಿವಾಹಕ್ಕೆ ಸಂಬಂಧಿಸಿದಂತೆ ಕುಟುಂಬವು ಬಹಳ ಸಮಸ್ಯೆಯನ್ನು ಎದುರಿಸುತ್ತಿದೆ. 


COMMERCIAL BREAK
SCROLL TO CONTINUE READING

ಇದು ಕೇವಲ ಆಶ್ಚರ್ಯಕರವಲ್ಲ, ಆದರೆ ಸಾಮಾನ್ಯ ಮನುಷ್ಯನ ಕೈ ಮತ್ತು ಕಾಲುಗಳಲ್ಲಿ 24 ಬೆರಳುಗಳನ್ನು ಹೊಂದಿರುವ ಬಗ್ಗೆ ಯಾರೂ ಊಹಿಸಿಯೂ ಇರುವುದಿಲ್ಲ. ಆದರೆ, ಅಟಾರಿ ಬ್ಲಾಕ್ನ ತೆಯುಸಾ ಬಜಾರ್ನ ಚೌಧರಿ ಟೋಲಾ ಮೊಹಲ್ಲಾದಲ್ಲಿ ಕುಟುಂಬದ ಹೆಚ್ಚಿನ ಸದಸ್ಯರ ಕೈ ಮತ್ತು ಕಾಲಿನಲ್ಲಿ ಆರಾರು ಬೆರಳುಗಳನ್ನು ಹೊಂದಿದ್ದಾರೆ.


ಸುಖಾಡಿ ಚೌಧರಿಯ ಮನೆಯ ಹಿರಿಯರ ಮತ್ತು ಮಹಿಳೆಯರ ಕೈ ಮತ್ತು ಪಾದಗಳಲ್ಲಿರುವ ಸಂಖ್ಯೆ ಆರು-ಆರು. ಕೈಗಳನ್ನು ಮತ್ತು ಪಾದಗಳನ್ನು ಸೇರಿಸಿ ಲೆಕ್ಕಹಾಕಿದರೆ, ಕುಟುಂಬದ ಸದಸ್ಯರ ಬೆರಳುಗಳ ಸಂಖ್ಯೆ 24 ಆಗಿದೆ. ಕುಟುಂಬದ 22 ಸದಸ್ಯರ ಕೈ ಮತ್ತು ಕಾಲುಗಳಲ್ಲಿ ಒಂದೊಂದು ಹೆಚ್ಚು ಬೆರಳುಗಳಿವೆ.  ಸಂಬಂಧಿಕರಲ್ಲೇ ಇಂತಹವರು ಎಂಟು ಜನ ಇದ್ದಾರೆ.



ಕಾಲಿನಲ್ಲಿ ಆರು ಬೆರಳಿರುವುದರಿಂದ ಮದುವೆಗೆ ತೊಂದರೆ.


ಈ ಕುಟುಂಬದ ಆರಾರು ಬೆರಳುಗಳ ಇತಿಹಾಸ ಪರ್ದಾದ ಸುಖ್ಧಾರಿ ಚೌಧರಿ ಅವರ ಅಜ್ಜಿ  ಮನೋ ದೇವಿಯವರಿಂದ ಪ್ರಾರಂಭವಾಯಿತು. ಮೊದಲನೆಯದಾಗಿ, ಮನೋ ದೇವಿ 24 ಬೆರಳುಗಳೊಂದಿದ್ದರು. ತರುವಾಯ, ಸುಖ್ಧಾರಿ ಚೌಧರಿ ಅವರು 24 ಬೆರಳುಗಳನ್ನು ಹೊಂದಿದ್ದ ಕುಟುಂಬದ ಮೊದಲ ವ್ಯಕ್ತಿಯಾಗಿದ್ದರು. ಅವರ ಪುತ್ರ ವಿಷ್ಣು ಚೌಧರಿ ಸಹ ಆರಾರು ಬೆರಳುಗಳನ್ನು ಹೊಂದಿದ ಅವರ ಉತ್ತರಾಧಿಕಾರಿಯಾದರು.


ಕುಟುಂಬದ ಸದಸ್ಯರು ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಇದರಿಂದ ಹುಡುಗಿಯರ ವಿವಾಹಕ್ಕೆ ಅಡ್ಡಿಯಾಗುತ್ತಿದೆ. ವರನ ಮನೆಯವರು ಹುಡುಗಿಯನ್ನು ನೋಡಿದ ನಂತರ ಆಕೆಗೆ ಕೈ-ಕಾಲಿನಲ್ಲಿ ಆರಾರು ಬೆರಳುಗಳಿವೆ ಎಂದು ಹೇಳಿ ಮದುವೆಯಾಗಲು ನಿರಾಕರಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ. 


ಅಷ್ಟೇ ಅಲ್ಲ ಕಾಲಿನಲ್ಲಿ ಆರು ಬೆರಳಿರುವುದರಿಂದ ಚಪ್ಪಲಿ ಧರಿಸುವುದು ಸಹ ಒಂದು ಸಮಸ್ಯೆಯಾಗಿದೆ.