Hyderabad: ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ..!
ಸಂಬಂಧಿಕರಿಂದ ಮಾಹಿತಿ ಸಂಗ್ರಹಿಸಿದ ಪೊಲೀಸರಿಗೆ ಆನ್‌ಲೈನ್ ಸಾಲವನ್ನು ಹೊರತುಪಡಿಸಿ ಯುವಕನಿಗೆ ಬೇರೆ ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿದುಬಂದಿದೆ.
ಹೈದರಾಬಾದ್: ಸಾಲದ ಆ್ಯಪ್ ಕಿರುಕುಳ(Loan App Fraud)ಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ 24 ವರ್ಷದ ಎಸ್.ರಮೇಶ್ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶುಕ್ರವಾರ ಸಂಜೆ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ರಮೇಶ್ ಅವರು ಇತ್ತೀಚೆಗೆ ಇನ್‌ಸ್ಟಂಟ್ ಮೈಕ್ರೋ ಲೋನ್ ಆ್ಯಪ್(Micro Loan App)ನಿಂದ 6 ಸಾವಿರ ರೂ. ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.
ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆ್ಯಪ್ ನಿರ್ವಾಹಕ(Instant Loan App)ರು ಯುವಕನ ಸಂಬಂಧಿಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಹೈದರಾಬಾದ್ ನ ಉಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು ಸ್ಥಳೀಯರ ಪ್ರಕಾರ, ವಾರಂಗಲ್ ಮೂಲದ ಎಸ್.ರಮೇಶ್ 8 ತಿಂಗಳಿಂದ ಉಪ್ಪಳದ ವಿಜಯಪುರಿಕಾಲನಿಯಲ್ಲಿ ಇಬ್ಬರು ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇದನ್ನೂ ಓದಿ: Viral Video:ಚಟ್ನಿಯೊಂದಿಗೆ ಗೋಲ್ಗಪ್ಪ ಐಸ್ ಕ್ರೀಮ್ ರೋಲ್! ಎಂದಾದರೂ ತಿಂದಿದ್ದೀರಾ?
ಗಣಿತ ಟೀಚರ್ ಆಗಿದ್ದ ರಮೇಶ್ ಆನ್‌ಲೈನ್‌ನಲ್ಲಿ ಮನೆ ಪಾಠ ಕಲಿಸುತ್ತ ಜೀವನ ಸಾಗಿಸುತ್ತೀದ್ದರು. ತನ್ನ ಖರ್ಚಿಗಾಗಿ ಆನ್ ಲೈನ್ ಮೈಕ್ರೋ ಆ್ಯಪ್(Micro Loan App) ಮೂಲಕ 6 ಸಾವಿರ ರೂ.ಸಾಲ ಪಡೆದಿದ್ದರು. ಆದರೆ ಸಾಲವನ್ನು ಸಕಾಲದಲ್ಲಿ ಮರುಪಾವತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಲೋನ್ ಆ್ಯಪ್‌ನ ನಿರ್ವಾಹಕರು ಸಾಲ ಪಡೆದುಕೊಂಡಿದ್ದ ಮಾಹಿತಿಯನ್ನು ಯುವಕನ ಸಂಬಂಧಿಕರ ಫೋನ್‌ಗಳಿಗೆ ಕಳುಹಿಸಿ ಆತನಿಗೆ ತೀವ್ರ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.
ಇದರಿಂದ ಬೇಸತ್ತ ರಮೇಶ್ ಶುಕ್ರವಾರ ರಾತ್ರಿ ಕೋಣೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್ ಗೆ ಟವೆಲ್ ಸುತ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಡವಾಗಿ ಮನೆಗೆ ಬಂದ ಸ್ನೇಹಿತರು ಮನೆಗೆ ಬೀಗ ಹಾಕಿರುವುದನ್ನು ಕಂಡು ಕಾದು ಕುಳಿತಿದ್ದರು. ಆದರೆ ಎಷ್ಟು ಹೊತ್ತಾದರೂ ಬಾರದಿದ್ದರಿಂದ ಕಿಟಕಿಯಿಂದ ನೋಡಿದಾಗ ರಮೇಶ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ರಮೇಶ್ ತಂದೆ ಸುಧಾಕರ್ ಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ನಂತರ ಸಹೋದರ ಹರೀಶ್ ಹಾಗೂ ಉಪ್ಪಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು(Hyderabad Police) ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Good News! Retirement ವಯಸ್ಸಿನಲ್ಲಿ ಹೆಚ್ಚಳ, Pension ಮೊತ್ತದಲ್ಲೂ ಹೆಚ್ಚಳ! ಇಲ್ಲಿದೆ ಸರ್ಕಾರದ ಹೊಸ ಪ್ಲಾನ್
ನಂತರ ಸಂಬಂಧಿಕರಿಂದ ಮಾಹಿತಿ ಸಂಗ್ರಹಿಸಿದ ಪೊಲೀಸರು, ಆನ್‌ಲೈನ್ ಸಾಲವನ್ನು ಹೊರತುಪಡಿಸಿ ಯುವಕನಿಗೆ ಬೇರೆ ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. 2020 ಮತ್ತು 2021ರಲ್ಲಿ ಸಾಲದ ಅಪ್ಲಿಕೇಶನ್ ಸಂಘಟಕರ ಕಿರುಕುಳದಿಂದ ತೆಲಂಗಾಣ(Telangana)ದಾದ್ಯಂತ ಕನಿಷ್ಠ 10 ಜನರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.