ಅಯೋಧ್ಯೆ: ದೇಶಾದ್ಯಂತ ವಿವಾದ ಉಂಟುಮಾಡಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದು ಇಂದಿಗೆ 25 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಒಂದೆಡೆ ವಿಶ್ವ ಹಿಂದೂ ಪರಿಷತ್ 'ಶೌರ್ಯ ದಿವಸ್' ಆಚರಿಸಲು ಮುಂದಾಗಿದ್ದಾರೆ, ಮತ್ತೊಂದೆಡೆ ಮುಸ್ಲಿಂ ಸಂಘಟನೆಗಳು 'ಯಮ್ ಇ ಗಮ್'(ದುಃಖದ ದಿನ) ಆಚರಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫೈಝಾಬಾದ್ ಮತ್ತು ಅಯೋಧ್ಯೆಯ ಅವಳಿ ಪಟ್ಟಣಗಳಲ್ಲಿ ಬೃಹತ್ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. 


COMMERCIAL BREAK
SCROLL TO CONTINUE READING

ಮಸೀದಿ ಧ್ವಂಸದ ಬೆಳ್ಳಿಯ ಮಹೋತ್ಸವದ ಸ್ಮರಣಾರ್ಥವಾಗಿ ವಿಶ್ವ ಹಿಂದೂ ಪರಿಷತ್ ಮಂಗಳವಾರ ಭಾರೀ ಆಚರಣೆಗಳಿಗೆ ಕರೆ ನೀಡಿದೆ. ಇದರ ಸಂಯೋಜಿತ ಸಂಸ್ಥೆಯಾದ ಭಜರಂಗದಳ ಇಂದು 'ಶೌರ್ಯ ದಿವಸ್' ಮತ್ತು 'ವಿಜಯ್ ದಿವಸ್' (ವಿಕ್ಟರಿ ಡೇ) ಆಚರಿಸಲಿದ್ದು, ಅಯೋಧ್ಯೆ-ಫೈಜಾಬಾದ್ ಜನರಿಗೆ ದೀಪಗಳಿಂದ ತಮ್ಮ ಮನೆಗಳನ್ನು ಬೆಳಗಿಸಲು ಮನವಿ ಮಾಡಿದೆ.


ಇನ್ನು, ಅಯೋಧ್ಯೆ-ಫೈಜಾಬಾದ್ನಲ್ಲಿ ಕೆಲವು ಮುಸ್ಲಿಂ ಸಂಘಟನೆಗಳು ಡಿಸೆಂಬರ್ 6 ರಂದು "ಯಾಮ್ ಇ ಗಮ್" ಆಚರಿಸುತ್ತಿದೆ. ಅಲ್ಲದೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಕಾರ್ಯಕರ್ತರು ಈ ದಿನವನ್ನು `ಬ್ಲಾಕ್ ಡೇ' (ಕರಾಳ ದಿನ) ಎಂದು ಆಚರಿಸುತ್ತಿದ್ದಾರೆ.


ಏತನ್ಮಧ್ಯೆ, ಎಲ್ಲ ರಾಜ್ಯಗಳಿಗೆ ಜಾಗರೂಕರಾಗಿರಲು ಮತ್ತು ಶಾಂತಿಯನ್ನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಂತೆ ಕೇಂದ್ರ ಹೇಳಿದೆ. 


ಶತಮಾನಗಳಷ್ಟು ಪುರಾತನವಾದ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ, ಡಿಸೆಂಬರ್ 5 ಪ್ರಾರಂಭಿಸಿದೆ. 


1992, ಡಿ.06 ರಂದು ಕರಸೇವಕರ ಆಕ್ರೋಶಕ್ಕೆ ಬಾಬ್ರಿ ಮಸೀದಿ ಗುರಿಯಾಗಿ ಧ್ವಂಸಗೊಂಡಿತು. ಏಕ್ ಧಕ್ಕಾ ಔರ್ ದೋ, "ಬಾಬ್ರಿ ಮಸ್ಜೀದ್ ತೋಡ್ ದೋ" ಎಂಬ ಘೋಷಣೆಯೊಂದಿಗೆ ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. 1990 ರಿಂದ ರಾಮಜನ್ಮಭೂಮಿ ಚಳುವಳಿ ಕಾವು ಪಡೆದುಕೊಂಡಿತ್ತು. 


ಆರ್ ಎಸ್ ಎಸ್ ಹಾಗೂ ವಿಹೆಚ್ಪಿ ಮುಖಂಡರ ನೇತೃತ್ವದಲ್ಲಿ ರಾಮ ಜನ್ಮಭೂಮಿಗಾಗಿ ನಿರಂತರ ಹೋರಾಟ ನಡೆದಿದ್ದು, ಪಿ.ವಿ.ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ 1992 ರಲ್ಲಿ ನಡೆದಿದ್ದ ಘಟನೆ ರಾಮಜನ್ಮಭೂಮಿ ಪ್ರಕರಣಕ್ಕೆ ಹಾಗೂ ದೇಶದ ರಾಜಕಾರಣದಲ್ಲಿ ದೊಡ್ಡ ಮಟ್ಟದ ತಿರುವು ನೀಡಿತ್ತು.