ನವದೆಹಲಿ: ಪಾಕಿಸ್ತಾನದ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ  ಇಮ್ರಾನ್ ಖಾನ್ ಈಗ ಪಾಕಿಸ್ತಾನದ ಮುಂದಿನ ಪ್ರಧಾನಿಯಾಗುವ ಸಿದ್ದತೆಗಳು ನಡೆದಿವೆ.ಆದರೆ  ಭಾರತದಲ್ಲೊಬ್ಬ ವ್ಯಕ್ತಿ 26 ವರ್ಷಗಳ ಹಿಂದೆಯೇ  ಇಮ್ರಾನ್ ಖಾನ್ ಒಂದು ದಿನ ಪಾಕಿಸ್ತಾನದ ಪ್ರಧಾನಿಯಾಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದರು. ಈಗ ಅದು ಅಕ್ಷರಶಃ ನಿಜವಾಗಿದೆ.


COMMERCIAL BREAK
SCROLL TO CONTINUE READING

1980 ಮತ್ತು 90 ರ ದಶಕದಲ್ಲಿ  ಇಡೀ ಕ್ರಿಕೆಟ್ ಜಗತ್ತನ್ನೇ ಆಳಿದ ಇಮ್ರಾನ್ ಖಾನ್ ಉತ್ತಮ ಆಲ್ ರೌಂಡರ್ ಕ್ರಿಕೆಟರ್. 1992 ರ ಅವಧಿಯಲ್ಲಿ  ಇಮ್ರಾನ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನ್ ತಂಡವು ವಿಶ್ವಕಪ್ ನ್ನು ಗೆದ್ದಿತ್ತು, ಇದಾದ ನಂತರ  ಬಾಲಿವುಡ್ ನಟ ಆಯುಷ್ಮಾನ್  ಖುರಾನಾ ತಂದೆಯವರು ವಿಶ್ವಕಪ್ ಗೆದ್ದ ನಂತರ ನೀಡಿದ ಭಾಷಣದ ನಂತರ " ಯೇ ಬಂದಾ ಪಕ್ಕಾ ಏಕ ದಿನ್ ಪಾಕಿಸ್ತಾನ್ ಕಾ ಪಿಎಂ ಬನೇಗಾ " ಎಂದು ಹೇಳಿದ್ದರು.


ಅಂದು 26 ವರ್ಷಗಳ ಹಿಂದೆ ಹೇಳಿದ್ದ ಈ ಭವಿಷ್ಯವಾಣಿ ಈಗ ನಿಜವಾಗಿದೆ. ಇಮ್ರಾನ್ ಖಾನ್ ಈಗ ಪಾಕಿಸ್ತಾನದ 19ನೇ ಪ್ರಧಾನಿಯಾಗುವ ನೀರಿಕ್ಷೆಯಲ್ಲಿದ್ದಾರೆ.