ಮುಂಬೈ ವೈದ್ಯಕೀಯ ಕಾಲೇಜಿನಲ್ಲಿ 29 ವಿದ್ಯಾರ್ಥಿಗಳಿಗೆ ಕೊರೊನಾ ಧೃಡ
ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಮುಂಬೈನ ಕಿಂಗ್ ಎಡ್ವರ್ಡ್ ಸ್ಮಾರಕ (ಕೆಇಎಂ)ಆಸ್ಪತ್ರೆಯ ಕನಿಷ್ಠ 29 ವಿದ್ಯಾರ್ಥಿಗಳಿಗೆ COVID -19 ಇರುವುದು ಧೃಡಪಟ್ಟಿದೆ.ಮಾಧ್ಯಮ ವರದಿಗಳ ಪ್ರಕಾರ, ಅವರಲ್ಲಿ 27 ಜನರು ಎರಡೂ ಲಸಿಕೆಗಳನ್ನುತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ನವದೆಹಲಿ: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಮುಂಬೈನ ಕಿಂಗ್ ಎಡ್ವರ್ಡ್ ಸ್ಮಾರಕ (ಕೆಇಎಂ)ಆಸ್ಪತ್ರೆಯ ಕನಿಷ್ಠ 29 ವಿದ್ಯಾರ್ಥಿಗಳಿಗೆ COVID -19 ಇರುವುದು ಧೃಡಪಟ್ಟಿದೆ.ಮಾಧ್ಯಮ ವರದಿಗಳ ಪ್ರಕಾರ, ಅವರಲ್ಲಿ 27 ಜನರು ಎರಡೂ ಲಸಿಕೆಗಳನ್ನುತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳ ಪ್ರಕಾರ, 23 ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಮತ್ತು ಆರು ಮಂದಿ ಮೊದಲ ವರ್ಷದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.ಅದೇ ವರದಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಇತರರನ್ನು ಸಂಪರ್ಕತಡೆಯಲ್ಲಿರಲು ಹೇಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.ಈ ಎಲ್ಲ ವಿದ್ಯಾರ್ಥಿಗಳು ಹೇಗೆ ವೈರಸ್ ಸೋಂಕಿಗೆ ಒಳಗಾದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ-Punjab Congressನಲ್ಲಿ ಬಿರುಕು! ಸಿಧು ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಘೋಷಿಸಿದ ಕ್ಯಾಪ್ಟನ್
ಏತನ್ಮಧ್ಯೆ, ಸೆಪ್ಟೆಂಬರ್ 30 ರಂದು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 23,529 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 311 ಸಾವುಗಳು ದಾಖಲಾಗಿವೆ, ಒಟ್ಟಾರೆ ಕೇಸ್‌ಲೋಡ್ 3,37,39,980 ಕ್ಕೆ ಮತ್ತು ಒಟ್ಟು ಸಾವಿನ ಸಂಖ್ಯೆ 4,48,062 ಕ್ಕೆ ತಲುಪಿದೆ ಎಂದು ಸಚಿವಾಲಯ ಹೇಳಿದೆ.ಇವುಗಳಲ್ಲಿ, ಕೇರಳದಲ್ಲಿ 12,161 ಹೊಸ ಪ್ರಕರಣಗಳು ಮತ್ತು 155 ಸಾವುಗಳನ್ನು ನೀಡಿದೆ.
ಇದನ್ನೂ ಓದಿ-Punjab New Chief Minister: ಪಂಜಾಬ್ CM ಆಫರ್ ತಿರಸ್ಕರಿಸಿದ Ambika Soni, ಶಾಸಕಾಂಗ ಪಕ್ಷದ ಸಭೆಯೂ ರದ್ದು
ಚೇತರಿಕೆ ದರವು ಪ್ರಸ್ತುತ ಶೇ 97.85 ರಲ್ಲಿದೆ, ಇದು ಮಾರ್ಚ್ 2020 ರ ನಂತರ ಅತ್ಯಧಿಕವಾಗಿದೆ.ದೇಶವು 1.74 ಶೇಕಡಾ ಸಾಪ್ತಾಹಿಕ ಧನಾತ್ಮಕ ದರವನ್ನು ವರದಿ ಮಾಡಿದೆ,ಇದು ಕಳೆದ 97 ದಿನಗಳಲ್ಲಿ 3 ಶೇಕಡಾಕ್ಕಿಂತ ಕಡಿಮೆಯಾಗಿದೆ.ದೇಶದಲ್ಲಿ ದಿನನಿತ್ಯದ ಸಕಾರಾತ್ಮಕತೆಯ ದರವು ಶೇಕಡಾ 1.56 ರಷ್ಟಿದ್ದು, ಕಳೆದ 31 ದಿನಗಳಲ್ಲಿ 3 ಶೇಕಡಕ್ಕಿಂತಲೂ ಕಡಿಮೆಯಿದೆ.
ಇದನ್ನೂ ಓದಿ-ನಾನಕಾನಾ ಸಾಹೀಬ್ ಮೇಲೆ ಹಲ್ಲೆ, ಸಿದ್ಧು ಮೌನವನ್ನು ಪ್ರಶ್ನಿಸಿದ BJP
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.