ನವದೆಹಲಿ: ಸಾಮಾಜಿಕ ಜಾಲತಾಣಗಳ ಪ್ಲ್ಯಾಟ್‌ ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಳ್ಳಲು ರಾಷ್ಟ್ರ ವಿರೋಧಿ ಅಂಶಗಳು ಮತ್ತು ಗಡಿಯುದ್ದಕ್ಕೂ ಇರುವವುದನ್ನು ತಡೆಗಟ್ಟುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಮಂಗಳವಾರ (ಫೆಬ್ರವರಿ 25) ಸಾಮಾಜಿಕ ಜಾಲತಾಣಗಳು ಮತ್ತು ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳನ್ನು (ವಿಪಿಎನ್‌ಗಳು) ಕೇಂದ್ರಾಡಳಿತ ಪ್ರದೇಶದಲ್ಲಿ ನಿರ್ಬಂಧಿಸಲಾಗುವುದು ಎಂದು ದೃಢಪಡಿಸಿದೆ.


COMMERCIAL BREAK
SCROLL TO CONTINUE READING

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾರ್ಚ್ 4 ರವರೆಗೆ 2 ಜಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಕುಳಿತಿರುವ ರಾಷ್ಟ್ರ ವಿರೋಧಿ ಅಂಶಗಳು ಮತ್ತು ಅವರ ಹ್ಯಾಂಡ್ಲರ್‌ಗಳು ಭಾರತದಲ್ಲಿ ಅಶಾಂತಿ ಸೃಷ್ಟಿಸಲು ವಿಪಿಎನ್‌ಗಳನ್ನು ಇನ್ನೂ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ಹೇಳಿದೆ. ಸರ್ಕಾರಿ ಅಧಿಕಾರಿಗಳ ಪ್ರಕಾರ ಉಗ್ರರು ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಲು ಮತ್ತು ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಲು ರಾಷ್ಟ್ರ ವಿರೋಧಿ ಪಡೆಗಳು ವಿಪಿಎನ್‌ಗಳನ್ನು ಬಳಸುತ್ತಿವೆ ಎನ್ನಲಾಗಿದೆ.


ಮಾರ್ಚ್ 4 ರವರೆಗೆ ನಿರ್ಬಂಧಗಳನ್ನು ಮುಂದುವರಿಸುವ ಆದೇಶಕ್ಕೆ ಜಮ್ಮು ಮತ್ತು ಕಾಶ್ಮೀರ ಗೃಹ ಕಾರ್ಯದರ್ಶಿ ಶಲೀನ್ ಕಬ್ರಾ ಸಹಿ ಹಾಕಿದರು. ಆದೇಶದ ಪ್ರಕಾರ,ಎಲ್ಲಾ ಅಂತರ್ಜಾಲ ಸೇವಾ ಪೂರೈಕೆದಾರರು (ಐಎಸ್‌ಪಿಗಳು) ಕೇಂದ್ರಾಡಳಿತ ಪ್ರದೇಶದ ಜನರು ಕೇವಲ 1,674 ಬಿಳಿ-ಪಟ್ಟಿ ಮಾಡಲಾದ ಸೈಟ್‌ಗಳನ್ನು ಮಾತ್ರ ಪ್ರವೇಶಿಸಬಹುದೆಂದು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಮತ್ತು ಯಾವುದೇ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಮತ್ತು ವಿಪಿಎನ್ ಅಪ್ಲಿಕೇಶನ್‌ಗಳಲ್ಲ ಎನ್ನಲಾಗಿದೆ.


2019 ರ ಆಗಸ್ಟ್ 5 ರಂದು ಅಮಾನತುಗೊಂಡ ನಂತರ ಜನವರಿ 25 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್ ಫೋನ್‌ಗಳಲ್ಲಿನ 2 ಜಿ ಇಂಟರ್ನೆಟ್ ಸೌಲಭ್ಯವನ್ನು ಪುನಃಸ್ಥಾಪಿಸಲಾಗಿದೆ, ಇದು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯನ್ನು ರದ್ದುಗೊಳಿಸಲು ಕೇಂದ್ರ ನಿರ್ಧರಿಸಿತು.