ನವದೆಹಲಿ : 2 ಜಿ ಸ್ಪೆಕ್ಟ್ರಂ ಹಗರಣ ಪ್ರಕರಣದಲ್ಲಿ ತಪ್ಪಿತಸ್ಥ ಆರೋಪಿಯಾಗಿದ್ದ ಮಾಜಿ ಸಚಿವ ಎ.ರಾಜ, ಪ್ರಕರಣದ ತೀರ್ಪು ಹೊರಬಿದ್ದ ಒಂದು ದಿನದ ಬಳಿಕ ಮಾಜಿ ಮುಖ್ಯಮಂತ್ರಿ ಎ.ಕರುಣಾನಿಧಿಗೆ ಭಾವನಾತ್ಮಕ ಪತ್ರ ಬರೆದಿದ್ದು, `ಈ ತೀರ್ಪನ್ನು ತಮ್ಮ ಚರಣ ಕಮಲಗಳಿಗೆ ಅರ್ಪಿಸುತ್ತೀದ್ದೇನೆ' ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

"ನಿಮ್ಮ 80 ವರ್ಷಗಳ ಸಾರ್ವಜನಿಕ ಜೀವನವದ ಮೇಲೆ ಆರೋಪ ಮಾಡಿದವರಿಗೆ ಯಾರು ಶಿಕ್ಷೆ ನೀಡುತ್ತಾರೆ ? ನಾನು ಈ ತೀರ್ಪನ್ನು ನಿಮ್ಮ ಚರಣಗಳಿಗೆ ಅರ್ಪಿಸುತ್ತಿದ್ದೇನೆ. ನೀವು ನನ್ನನ್ನು ಮಂಜಿನಂತೆ ರಕ್ಷಿಸಿದ್ದೀರಿ. ಹಾಗಾಗಿ ನಾನು ಈ ಸ್ಪೆಕ್ರಂ ಯುದ್ಧದಲ್ಲಿ ಕರಗುವುದಿಲ್ಲ. ನಾನು ನಿಮ್ಮ ಮಾತುಗಳನ್ನು ಕೇಳಲು ಕಾಯುತ್ತಿದ್ದೀನೆ'' ಎಂದು ಅವರು ಬರೆದರು. 


"ಸ್ಪೆಕ್ಟ್ರಮ್ ದಾಳಿ ಸೈದ್ಧಾಂತಿಕ ಆಂದೋಲನವನ್ನೇ ಉಂಟುಮಾಡಿತು. ನಿಮ್ಮ ಸರ್ಕಾರವನ್ನು ಅಲ್ಲಾಡಿಸಲಾಗದವರಿಗೆ ಈ ಪ್ರಕರಣ ಒಂದು ಕಾರಣವಾಯಿತು. ಈ ಸ್ಪೆಕ್ಟ್ರಂ ಪ್ರಕರಣವು ಕೆಲವು ವ್ಯಕ್ತಿಗಳಿಂದ ರೂಪುಗೊಂಡು, ಸಿವಿಸಿ, ಸಿಬಿಐ, ಜೆವಿಸಿ ಸೇರಿದಂತೆ ಇತರ ಸಂಸ್ಥೆಗಳಿಂದ ನಡೆಸಲ್ಪಟ್ಟಿತು'' ಎಂದು ಅವರು ಹೇಳಿದರು.


ಮುಂದುವರೆದು ಬರೆದಿರುವ ಅವರು, ಈ ಸತ್ಯವನ್ನು ಯುಪಿಎ ಸರ್ಕಾರ ಕೂಡ ಅರ್ಥಮಾಡಿಕೊಳ್ಳದಿರುವುದು ನಿಜಕ್ಕೂ ಅವಮಾನ'' ಎಂದು ಹೇಳಿದ್ದಾರೆ.