ಅಸ್ಸಾಂನ ತೇಜ್‌ಪುರದಲ್ಲಿ 3.4 ತೀವ್ರತೆಯ ಭೂಕಂಪ
Earthquake: ಇಂದು ಬೆಳ್ಳಂಬೆಳಗ್ಗೆ ಅಸ್ಸಾಂನಲ್ಲಿ ಲಘು ಭೂಕಂಪ ಸಂಭವಿಸಿದೆ. ಅಸ್ಸಾಂನ ಸೋನಿತ್‌ಪುರದ ತೇಜ್‌ಪುರದಿಂದ ಪೂರ್ವಕ್ಕೆ 42 ಕಿಲೋಮೀಟರ್‌ಗಳಷ್ಟು ಕೇಂದ್ರೀಕೃತವಾಗಿತ್ತು ಎಂದು ವರದಿಯಾಗಿದೆ.
Earthquake In Assam: ಬುಧವಾರ ಮುಂಜಾನೆ 5:55ರ ಸುಮಾರಿಗೆ ಅಸ್ಸಾಂನ ತೇಜ್‌ಪುರದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. ಆದಾಗ್ಯೂ ಯಾವುದೇ ಆಸ್ತಿಪಾಸ್ತಿ ಅಥವಾ ಪ್ರಾಣಹಾನಿಯ ಬಗ್ಗೆ ವರದಿಯಾಗಿಲ್ಲ.
ಈ ಭೂಕಂಪವು ಅಸ್ಸಾಂನ ಸೋನಿತ್‌ಪುರದ ತೇಜ್‌ಪುರದಿಂದ ಪೂರ್ವಕ್ಕೆ 42 ಕಿಲೋಮೀಟರ್‌ಗಳಷ್ಟು ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ. NCS ಪ್ರಕಾರ ಭೂಕಂಪದ ಕೇಂದ್ರಬಿಂದು ಅಕ್ಷಾಂಶ 26.70 ಮತ್ತು ರೇಖಾಂಶ 93.22 ರಲ್ಲಿ ಕಂಡುಬಂದಿದೆ.
ಇದನ್ನೂ ಓದಿ- ಕೋವಿಡ್ ಜೆಎನ್.1 ರೂಪಾಂತರಿಯ ಹಾವಳಿ: ಕೇರಳದಿಂದ ಗುಡ್ ನ್ಯೂಸ್, ಕರ್ನಾಟಕದಲ್ಲಿ ಅಲರ್ಟ್
ವಾಸ್ತವವಾಗಿ, ಅಸ್ಸಾಂನಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ಹಿಮಾಲಯ ಶ್ರೇಣಿಯಲ್ಲಿನ ಟೆಕ್ಟೋನಿಕ್ ಪ್ಲೇಟ್ ಅಸ್ಥಿರವಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಹಾಗಾಗಿಯೇ ಅಸ್ಸಾಂ ಹೆಚ್ಚು ಭೂಕಂಪನ ವಲಯದಲ್ಲಿ ಭೌಗೋಳಿಕ ಸ್ಥಾನದಿಂದಾಗಿ ಅಂತಹ ನೈಸರ್ಗಿಕ ವಿಕೋಪಗಳಿಗೆ ದುರ್ಬಲತೆಗೆ ಹೆಸರುವಾಸಿಯಾಗಿದೆ.
ಇದನ್ನೂ ಓದಿ- ಕೊನೆಗೂ 280 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಬಂದಿಳಿದ ಫ್ರಾನ್ಸ್ ವಶದಲ್ಲಿದ್ದ ವಿಮಾನ!
ಅಸ್ಸಾಂ ರಾಜ್ಯವು ವಿನಾಶಕಾರಿ ಭೂಕಂಪಗಳ ಇತಿಹಾಸವನ್ನು ಹೊಂದಿದ್ದು, 1950ರಲ್ಲಿ ಅಸ್ಸಾಂ-ಟಿಬೆಟ್ ಭಾಗದಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿತು. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 8.6ರಷ್ಟಿತ್ತು. ಇದರಿಂದಾಗಿ ಅಸ್ಸಾಂ ಮತ್ತು ನೆರೆಯ ಪ್ರದೇಶಗಳಲ್ಲಿ ಸುಮಾರು 4,000 ಜನ ಮರಣಹೊಂದಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.