ಅಜಮ್‌ಗಢ (ಉತ್ತರ ಪ್ರದೇಶ): ಭಾರತೀಯ ಸಂವಿಧಾನದ ಶಿಲ್ಪಿ ಡಾ.ಭೀಮ್ ರಾವ್ ಅಂಬೇಡ್ಕರ್ ಅವರ ಮೂರು ಪ್ರತಿಮೆಗಳನ್ನು ಕೆಲವು ದುಷ್ಕರ್ಮಿಗಳು ಅಜಮ್‌ಗಢದ ದಿಯೋಗಾಂವ್ ಪ್ರದೇಶದ ಮೂರು ಸ್ಥಳಗಳಲ್ಲಿ ಧ್ವಂಸ ಮಾಡಿರುವ ಬಗ್ಗೆ ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

"ಮೂರು ಗ್ರಾಮಗಳಿಂದ ಅಂಬೇಡ್ಕರ್ ಅವರ ವಿಗ್ರಹಗಳನ್ನು ಧ್ವಂಸಗೊಳಿಸಿರುವ ವಿಧ್ವಂಸಕ ಕೃತ್ಯದ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಅಜಮ್‌ಗಢದ ಪೊಲೀಸ್ ಅಧೀಕ್ಷಕ ಪವನ್ ಪಾಂಡೆ ಮಂಗಳವಾರ ಎಎನ್‌ಐಗೆ ತಿಳಿಸಿದ್ದಾರೆ.


ಮಿರ್ಜಾ ಅಡಾಂಪುರ್, ಸಿರ್ಕಾಂತ್‌ಪುರ ಮತ್ತು ಬರ್ಮನ್‌ಪುರ ಗ್ರಾಮಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಧ್ವಂಸ ಮಾಡಲಾಗಿದೆ.  ಆರೋಪಿಗಳನ್ನು ಹುಡುಕಲು ಸ್ಥಳೀಯ ಗುಪ್ತಚರರಿಗೆ ತಿಳಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.


"ಮಿರ್ಜಾ ಅಡಂಪೂರ್ನಲ್ಲಿ, 20 ವರ್ಷಗಳ ಹಿಂದೆ ಅಂಬೇಡ್ಕರ್ ಅವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಮಂಗಳವಾರ ಬೆಳಿಗ್ಗೆ, ಅದನ್ನು ನೋಡಿದಾಗ ಪ್ರತಿಮೆಯು ಧ್ವಂಸವಾಗಿತ್ತು" ಎಂದು ಸ್ಥಳೀಯ ನಿವಾಸಿ ಹೇಳಿದರು.