ಮುಂಬೈ: ಮುಂಬೈಯಲ್ಲಿ ಮಂಗಳವಾರ ದಿನಪೂರ್ತಿ ಸುರಿದ ಮಳೆಯಿಂದಾಗಿ ಜನರು ತೊಂದರೆಗೊಳಗಾಗಿದ್ದಾರೆ. ವಾಸ್ತವವಾಗಿ ಭಾರೀ ಮಳೆಯಿಂದಾಗಿ ಹಲವು ಸ್ಥಳಗಳಲ್ಲಿ ಗೋಚರತೆ ಮಟ್ಟ ತೀವ್ರ ಕಡಿಮೆ ಇದ್ದದ್ದರಿಂದ ಇಂದು ಮುಂಜಾನೆ ಮೂರು ಕಾರುಗಳ ಮಧ್ಯೆ ಪರಸ್ಪರ ಡಿಕ್ಕಿಯಾಗಿರುವ ಘಟನೆ ಅಂಧೇರಿಯಲ್ಲಿ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಕಡಿಮೆ ಗೋಚರತೆಯಿಂದಾಗಿ ಅಂಧೇರಿ ಫ್ಲೈಓವರ್‌ನಲ್ಲಿ ಬುಧವಾರ ಬೆಳಿಗ್ಗೆ ಮೂರು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಎಂಟು ಜನರು ಗಾಯಗೊಂಡಿದ್ದಾರೆ.


ಮುಂಬೈಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ನೀರು ಹರಿಯುತ್ತಿದೆ. ಭಾರಿ ಮಳೆಯಿಂದಾಗಿ ಮುಂಬೈನ ಲೈಫ್‌ಲೈನ್ ಎಂಬ ರೈಲು ಸಂಚಾರದಲ್ಲೂ ಕೂಡ ಕೆಟ್ಟ ಪರಿಣಾಮ ಬೀರಿದೆ. ರೈಲು ಹಳಿಗಳು ಪ್ರವಾಹಕ್ಕೆ ಸಿಲುಕಿರುವುದರಿಂದ ಅನೇಕ ಮುಖ್ಯ ರೈಲುಗಳ ಸಂಚಾರ ಸ್ಥಗಿತಗೊಂಡಿವೆ. ಮುಂದಿನ 24 ಗಂಟೆಗಳಲ್ಲಿ ವಾಣಿಜ್ಯ ನಗರಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಬಿಎಂಸಿ ಟ್ವೀಟ್ ಮಾಡಿದೆ.


ಪ್ರತಿ ವರ್ಷ ಮಾನ್ಸೂನ್ ಪ್ರಾರಂಭವಾದಂತೆ ಮುಂಬೈ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂಬುದು ಗಮನಾರ್ಹವಾಗಿದೆ. ಮಂಗಳವಾರ ರಾತ್ರಿ ಧಾರಾಕಾರ ಮಳೆಯ ನಂತರ ನಗರದ ಹಲವು ಪ್ರದೇಶಗಳಲ್ಲಿ ನೀರು ತುಂಬಿತ್ತು. ಏತನ್ಮಧ್ಯೆ, ಹವಾಮಾನ ಇಲಾಖೆ ಮುಂದಿನ ಎರಡು ದಿನಗಳವರೆಗೆ ಭಾರೀ ಮಳೆ ಎಚ್ಚರಿಕೆ ನೀಡಿದೆ. ಮುಂಬೈನಲ್ಲಿ ಜುಲೈ 24 ರಿಂದ ಜುಲೈ 28 ರವರೆಗೆ ಭಾರಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.


ಮಂಗಳವಾರ ರಾತ್ರಿ, ಭಾರಿ ಮಳೆಯ ನಂತರ, ಹಿಂದ್ಮಾತಾ ಪ್ರದೇಶದಲ್ಲಿ ನೀರು ಹರಿಯಿತು. ಜನರು ಮೊಣಕಾಲುಗಳವರೆಗೆ ನೀರಿನ ಮೂಲಕ ಹೋಗಬೇಕಾಗುತ್ತದೆ. ನಗರದ ಇತರ ಪ್ರದೇಶಗಳಲ್ಲೂ, ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.