ಜಲಗಾಂ: ಮೂವರು ಅಪ್ರಾಪ್ತ ಬಾಲಕರು ಸವರ್ಣೀಯರ ಬಾವಿಯಲ್ಲಿ ಈಜಿದ ಕಾರಣಕ್ಕಾಗಿ ಅವರನ್ನು ಬೆತ್ತಲೆಗೊಳಿಸಿ ಥಳಿಸಿ ಮೆರವಣಿಗೆ ಮಾಡಿರುವ ಅವಮಾನವೀಯ ಘಟನೆ ಮಹಾರಾಷ್ಟ್ರದ ಜಲಗಾಂ ನ ಹಳ್ಳಿಯೊಂದರಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಈ ಘಟನೆಯು ಇದೇ ಜೂನ್ 10 ರಂದು ನಡೆದಿದ್ದು ಎಂದು ಹೇಳಲಾಗಿದೆ. ಆದರೆ ದಲಿತ ಹುಡುಗರನ್ನು ನಗ್ನವಾಗಿ ಥಳಿಸಿ ಮೆರವಣಿಗೆ ಮಾಡಿದ ನಂತರ ವೀಡಿಯೋ ಸಾಮಾಜಿಕ ವೈರಲ್ ಆಗಿದೆ ,ಆಗ ಮಾತ್ರ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಲ್ಲಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.


ಈಗ ಘಟನೆ ಬಿಜೆಪಿ-ಶಿವಸೇನಾ ನೇತೃತ್ವದ ಸರ್ಕಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಬಂಡವಾಳ ಹೂಡಿಕೆದಾರರನ್ನು ರಾಜ್ಯಕ್ಕೆ ಆಹ್ವಾನಿಸುವ ನಿಟ್ಟಿನಲ್ಲಿ ದುಬೈ,ಕೆನಡಾ ಮತ್ತು ಅಮೇರಿಕಾಗೆ ತೆರಳಿದ ನಂತರ ನಡೆದಿರುವುದು ಸರ್ಕಾರವನ್ನು ತಲೆತಗ್ಗಿಸುವ ಹಾಗೆ ಮಾಡಿದೆ. 


ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ರಾಜ್ಯ ಸಾಮಾಜಿಕ ನ್ಯಾಯ ಸಚಿವ ದಿಲೀಪ್ ಕಾಂಬಳೆ ಈಗಾಗಲೇ ಈ ಘಟನೆಗೆ ಸಂಬಂಧಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.