ನವದೆಹಲಿ: ಈಗಾಗಲೇ ಶಕ್ತಿಶಾಲಿಯಾಗಿರುವ ಭಾರತೀಯ ವಾಯುಸೇನೆಗೆ (IAF) ಮತ್ತಷ್ಟು ಬಲ ಬರಲಿದೆ. ನ. 5 ರಂದು ಮತ್ತೆ ಮೂರು ರಾಫೆಲ್ (Rafel) ಯುದ್ಧ ವಿಮಾನ ಅಂಬಾಲಾ ವಾಯುನೆಲೆಗೆ ಆಗಮಿಸುವ ನಿರೀಕ್ಷೆಯಿದೆ.


COMMERCIAL BREAK
SCROLL TO CONTINUE READING

ಈಗಾಗಲೇ 5 ರಾಫೆಲ್ (Rafel) ಯುದ್ಧ ವಿಮಾನ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿವೆ. ಈ ಯುದ್ದ ವಿಮಾನಗಳು ಜುಲೈ 29ರಂದು  ಅಂಬಾಲಾ ವಾಯುನೆಲೆಗೆ  (Ambala Air Base)ಆಗಮಿಸಿತ್ತು. 2ನೇ ಹಂತದಲ್ಲಿ 3 ರಾಫೆಲ್ ಯುದ್ಧ ವಿಮಾನಗಳು ನ. 5ಕ್ಕೆ ಅಂಬಾಲಾ ವಾಯುನೆಲೆಗೆ ಆಗಮಿಸಲಿದೆ. 


ರಫೇಲ್ ವಿವಾದ:ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆ ಸಂಪೂರ್ಣ ಆಧಾರ ರಹಿತ-ರಾಜನಾಥ್ ಸಿಂಗ್


ಈಗಾಗಲೇ ಭಾರತೀಯ ಪೈಲೆಟ್ ಗಳಿಗೆ  7 ರಾಫೆಲ್ ಯುದ್ಧ ವಿಮಾನಗಳನ್ನು ಬಳಸಿಕೊಂಡು ಫ್ರಾನ್ಸ್ ನಲ್ಲಿ (France) ತರಬೇತಿ ನೀಡಲಾಗುತ್ತಿದೆ. ಎಲ್ಎಸಿ (LAC) ಬಳಿ ಈಗಾಗಲೇ ರಾಫೆಲ್ ಕಾರ್ಯ ನಿರ್ವಹಿಸುತ್ತಿದೆ. 2016ರ ಒಪ್ಪಂದದ ಪ್ರಕಾರ, ಭಾರತ ಫ್ರಾನ್ಸ್ ನಿಂದ 36 ರಾಫೆಲ್ ಯುದ್ಧ ವಿಮಾನಗಳನ್ನು ಪಡೆಯಲಿದೆ. ಇದು 59 ಸಾವಿರ ಕೋಟಿಯ ವ್ಯವಹಾರವಾಗಿದೆ.  ಮುಂದಿನ ವರ್ಷದ ಏಪ್ರಿಲ್ ವೇಳೆಗ 16 ಹೆಚ್ಚುವರಿ ರಾಫೆಲ್ ಯುದ್ದ ವಿಮಾನಗಳು ಭಾರತೀಯ ವಾಯುಸೇನೆಯ(IAF)  ಬತ್ತಳಿಕೆ ಸೇರಲಿದೆ.


ರಾಫೆಲ್ ಮುಂದಿನ ತಲೆಮಾರಿನ ಅತ್ಯಾಧುನಿಕ ಯುದ್ಧವಿಮಾನವಾಗಿದೆ. ಇದು ಆಗಸದಿಂದ ನೆಲಕ್ಕೆ ದಾಲಿಯಿಡುವ ಸಾಮರ್ಥ್ಯ ಹೊಂದಿರುವ ಫ್ರಂಚ್ ಹ್ಯಾಮರ್, ಆಗಸದಿಂದ ಗಸಕ್ಕೆ ಚಿಮ್ಮುನ ಕ್ಷಿಪಣಿ, ಕ್ರೂಸ್ ಕ್ಷಿಪಣಿ, ಇಸ್ರೇಲ್ ನಿರ್ಮಿತಹೆಲ್ಮೆಟ್, ರಾಡಾರ್ ಮುನ್ನೆಚ್ಚರಿಕಾ ರಿಸೀವರ್ ಜಾಮರ್ ಗಳನ್ನು ಹೊಂದಿದೆ.  ಇದಲ್ಲದೆ, 10 ಗಂಟೆಗಳ ಹಾರಾಟ ದತ್ತಾಂಶ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ಫ್ರಾ ರೆಡ್ ಸರ್ಚ್  ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ರಾಫೆಲ್ ನಲ್ಲಿದೆ.