ಬಸ್ತರ್: ಜೀವನವನ್ನು ಮರಳಿ ಪ್ರಾರಂಭಿಸುವ ಕಾರಣದಿಂದಾಗಿ ಮೂರು ನಕ್ಸಲರು ಛತ್ತೀಸ್ಗಢದ ಬಸ್ತರ್ ನಲ್ಲಿ ಭದ್ರತಾ ಪಡೆಗಳ ಮುಂದೆ ಶರಣಾದರು.


COMMERCIAL BREAK
SCROLL TO CONTINUE READING

ಶರಣಾಗತರಾಗಿರುವ ನಕ್ಸಲ್ ರನ್ನು ಸಂತು, ರಾಮು ಮತ್ತು ಜಾಗ್ರಾಮ್ ಎಂದು ಹೇಳಲಾಗಿದೆ. ಶರಣಾಗತರಾದ ನಂತರ ANI ಗೆ ಪ್ರತಿಕ್ರಿಯಿಸಿದ ಸಂತು "ನಮ್ಮ ಕುಟುಂಬದ ಸದಸ್ಯರು ಮರಳಬೇಕೆಂದು ಅವರು ಬಯಸಿದ್ದರು, ಅಲ್ಲದೆ ಭದ್ರತಾ ಪಡೆಗಳು ನಡೆಸಿದ ನಿರಂತರ ಕಾರ್ಯಾಚರಣೆಯಿಂದ ಅವರು ಭಯಪಟ್ಟಿದ್ದಾರೆ. ಆದ್ದರಿಂದ ನಾವು ಈಗ ಸಹಜ ಜೀವನವನ್ನು ಮುನ್ನಡೆಸಬೇಕು ಮತ್ತು ನಮ್ಮ ಕುಟುಂಬಗಳನ್ನು ನೋಡಿಕೊಳ್ಳಬೇಕು" ಎಂದು ತಿಳಿಸಿದರು.


ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಜಿಲ್ಲಾ ಆಡಳಿತ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.ಅದರಲ್ಲಿ ಅವರಿಗೆ ಉದ್ಯೋಗವನ್ನು ಕಲ್ಪಿಸಿ ಸಹಜ ಜೀವನಕ್ಕೆ ಮರಳಲು ಸಹಾಯ ಮಾಡುತ್ತಿದ್ದಾರೆ ಎಂದು  ತಿಳಿದುಬಂದಿದೆ.