ಮುಂಬೈ: ಮಹಾರಾಷ್ಟ್ರದಲ್ಲಿ ಮೂರು ಎನ್‌ಸಿಪಿ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ಜೀ ಮೀಡಿಯಾಕ್ಕೆ ತಿಳಿಸಿವೆ.


COMMERCIAL BREAK
SCROLL TO CONTINUE READING

ಮುಂಬೈನ ಗಾರ್ವೇರ್ ಕ್ಲಬ್ ಹೌಸ್‌ನಲ್ಲಿ ಜುಲೈ 31 ರ ಬುಧವಾರ ಎನ್‌ಸಿಪಿಯ ಶಿವೇಂದ್ರ ಸಿಂಗ್ ರಾಜೇ ಭೋಸಲೆ, ವೈಭವ್ ಪಿಚಾದ್ ಮತ್ತು ಸಂದೀಪ್ ನಾಯಕ್ ಮತ್ತು ಕಾಂಗ್ರೆಸ್ನ ಕಾಳಿದಾಸ್ ಕೋಲಾಂಬ್ಕರ್ ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಲಾಗಿದೆ.


ಮುಂದಿನ ದಿನಗಳಲ್ಲಿ ಹಲವಾರು ಇತರ ಎನ್‌ಸಿಪಿ ನಾಯಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹಗಳು ಕೂಡ ಕೇಳಿಬರುತ್ತಿದೆ.


ಬಿಜೆಪಿ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಮುಖಂಡರನ್ನು ಬಿಜೆಪಿಗೆ ಸೇರಲು ಒತ್ತಡ ಹೇರಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.


ಆರೋಪಗಳನ್ನು ತಳ್ಳಿಹಾಕಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭಾನುವಾರ ಹಿರಿಯ ನಾಯಕನನ್ನು ತಮ್ಮ ಪಕ್ಷದೊಳಗಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಕೇಳಿಕೊಂಡರು.


"ಬಹಳಷ್ಟು ಎನ್‌ಸಿಪಿ ಮತ್ತು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಲು ಸಿದ್ಧರಿದ್ದಾರೆ. ಆದರೆ ನಾವು ಪಕ್ಷದಲ್ಲಿ ಆಯ್ಕೆಯಾದ ಕೆಲವರನ್ನು ಮಾತ್ರ ಸೇರಿಸಿಕೊಳ್ಳುತ್ತೇವೆ. ಇಡಿ ಅಥವಾ ಇನ್ನಾವುದೇ ವಿಚಾರಣೆ ನಡೆಯುತ್ತಿರುವ ಜನರನ್ನು ಪಕ್ಷದಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ನಾವು ಯಾರಿಗೂ ಆಹ್ವಾನವನ್ನೂ ನೀಡಿಲ್ಲ ಅಥವಾ ಯಾರ ಹಿಂದೆಯೂ ಬಿದ್ದಿಲ್ಲ. ಜನರು ತಾವಾಗಿಯೇ ಬಂದು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ"ಎಂದು ಎಎನ್‌ಐ ಆರೋಪವನ್ನು ಉಲ್ಲೇಖಿಸಿ ಫಡ್ನವಿಸ್ ಹೇಳಿದ್ದಾರೆ.