ಶ್ರೀನಗರ: ಜಮ್ಮ ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಹಾಗೂ ಜಮ್ಮ ಮತ್ತು ಕಾಶ್ಮೀರ ಪೊಲೀಸರು ಇತ್ತೀಚೆಗೆ ಉಗ್ರರ ಅಡಗುತಾಣಗಳಿಗೆ ನುಗ್ಗಿ ಭೇಟೆಯಾಡುತ್ತಿದ್ದಾರೆ. ಇದೀಗ ರಾತ್ರಿಯಿಡಿ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ಸೇನೆ ಯಶಸ್ವಿಯಾಗಿದೆ.


COMMERCIAL BREAK
SCROLL TO CONTINUE READING

ಕಳೆದ ರಾತ್ರಿ(ಡಿ.29) ಕಾಶ್ಮೀರ ಪೊಲೀಸರು ಉಗ್ರರ(Terrorists) ಜೊತೆಗೆ ಗುಂಡಿನ ಚಕಮಕಿ ನಡೆಸಿದ್ದಾರೆ. ತಕ್ಷಣವೇ ಭಾರತೀಯ ಸೇನೆ ಕೂಡ ಕಾಶ್ಮೀರ ಪೊಲೀಸರ ಜೊತೆ ಸೇರಿ ಗುಂಡಿನ ದಾಳಿ ನಡೆಸಿದೆ. ಅಡಗುತಾಣದಲ್ಲಿ ತಪ್ಪಿಸಿಕೊಂಡ ಉಗ್ರರಿಗಾಗಿ ಕಾರ್ಯಚರಣ ನಡೆಸಿದ ಸೇನೆ ಹಾಗೂ ಪೊಲೀಸ್ ಮೂವರು ಉಗ್ರರನ್ನು ಹತ್ಯೆ ಮಾಡಿದೆ.


Farmer Protest : ಕೇಂದ್ರ ಸರ್ಕಾರ -ರೈತ ಸಂಘಟನೆಗಳ ಮಾತುಕತೆ ; ನಾಲ್ಕು ಬೇಡಿಕೆಗಳ ಪೈಕಿ ಎರಡನ್ನು ಈಡೇರಿಸಲು ಒಪ್ಪಿದ ಸರ್ಕಾರ


ಅಡಗಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.ಶ್ರೀಗನರ ಬಾರಮುಲ್ಲಾ ಹೆದ್ದಾರಿಯ ಲಾಯಪೋರ ವಲಯದಲ್ಲಿ ಎನ್‌ಕೌಂಟರ್ ನಡೆಸಲಾಗಿದೆ. ಸಂಜೆ 5 ಗಂಟೆಗೆ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಉಗ್ರರು ಮನೆಯಲ್ಲಿ ತಂಗಿರುವ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ. ಉಗ್ರರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಜಂಟಿ ಕಾರ್ಯಚರಣೆಯಲ್ಲಿ ಯಶಸ್ಸು ಸಿಕ್ಕಿದೆ ಎಂದು ಕಾಶ್ಮೀರ ಪೊಲೀಸ್ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.


Farmers Protest: ರೈತರು  ಮತ್ತು ಕೇಂದ್ರದ 6 ನೇ ಸಂಧಾನ ಸಭೆ ಮತ್ತೆ ವಿಫಲ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ


Android Link - https://bit.ly/3hDyh4G


iOS Link - https://apple.co/3loQYe


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.