ನವದೆಹಲಿ: ಕಿಡ್ನಿ ತೆಗೆಯುವ ಶಸ್ತ್ರ ಚಿಕಿತ್ಸೆ ವೇಳೆ 30 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಲಿಮಾರ್ ಗಾರ್ಡನ್ ಪ್ರದೇಶದ ಸ್ಪರ್ಶ್ ಆಸ್ಪತ್ರೆಗೆ ಅಧಿಕಾರಿಗಳು ಮೊಹರು ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಆಸ್ಪತ್ರೆಯನ್ನು ನಡೆಸುತ್ತಿರುವ ವೈದ್ಯರ ವೈದ್ಯಕೀಯ ಪದವಿಯ ಸಿಂಧುತ್ವವನ್ನು ಪರಿಶೀಲಿಸಲು ನಾಲ್ಕು ವೈದ್ಯರ ಸಮಿತಿಯನ್ನು ರಚಿಸಲಾಗಿದೆ.


ಇದನ್ನೂ ಓದಿ: ರಾಷ್ಟ್ರಪತಿಯಿಂದ ಎಸ್,ಎಲ್ ಭೈರಪ್ಪ, ಸುಧಾಮೂರ್ತಿ ಗೆ ಪದ್ಮಭೂಷಣ ಪ್ರಧಾನ


ಹದಿನೈದು ದಿನಗಳ ಹಿಂದೆ, ಪಿತ್ತಕೋಶದ ಕಲ್ಲಿಗೆ ವೈದ್ಯರು ವ್ಯಕ್ತಿಯೊಬ್ಬನಿಗೆ ಶಸ್ತ್ರಚಿಕಿತ್ಸೆ ನಡೆಸಿ ಡಿಸ್ಚಾರ್ಜ್ ಮಾಡಿದ್ದರು, ಆದರೆ ಅವರ ಕಾಲುಗಳಲ್ಲಿ ಊತ ಕಾಣಿಸಿಕೊಂಡಿದ್ದರಿಂದ, ಸೋಮವಾರ ಮಧ್ಯಾಹ್ನ ಅವರನ್ನು ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು.ಈ ಸಮಯದಲ್ಲಿ,ವೈದ್ಯರು ಶಸ್ತ್ರಚಿಕಿತ್ಸೆಯ ಭಾಗವಾಗಿ ಅವರ ಮೂತ್ರಪಿಂಡವನ್ನು ತೆಗೆದುಹಾಕಿದರು.


ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದರೆ ಸಮಿತಿಯು ತನಿಖೆ ನಡೆಸಲಿದ್ದು, ಅದರಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಭವತೋಷ್ ಶಂಕಧರ್ ಪಿಟಿಐಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್ ಗೆ ಕಪ್ಪುಹಣ ಹೊರಗೆ ಬರುತ್ತದೆ ಎನ್ನುವ ಭಯವಿದೆ: ಸಿಎಂ ಬೊಮ್ಮಾಯಿ‌


ಇದಕ್ಕೂ ಮುನ್ನ, ಸೋಮವಾರ ಸಂಜೆ 4 ಗಂಟೆಗೆ ತನ್ನ ಮಗ ಸಾವನ್ನಪ್ಪಿದ್ದಾನೆ ಎಂದು ರೋಗಿಯ ತಂದೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.ಆದರೆ ವೈದ್ಯರು ಕುಟುಂಬದಿಂದ ಸತ್ಯವನ್ನು ಮರೆಮಾಚಿದ್ದಾರೆ.ಹೆಚ್ಚಿನ ತನಿಖೆಗಾಗಿ ದೂರನ್ನು ಸಿಎಂಒಗೆ ರವಾನಿಸಲಾಗಿದೆ ಎಂದು ಎಸಿಪಿ ಸಾಹಿಬದಾದ್ ಭಾಸ್ಕರ್ ರಾವ್ ತಿಳಿಸಿದ್ದಾರೆ.


ಮಂಗಳವಾರ ಬೆಳಗ್ಗೆ ಕಾಲೊನಿ ನಿವಾಸಿಗಳು ಆಸ್ಪತ್ರೆಯ ಹೊರಗೆ ಜಮಾಯಿಸಿ ಸಂಚಾರ ತಡೆ ನಡೆಸಿದರು. ವೈದ್ಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಹೊಡೆತಕ್ಕೆ ಹೆದರಿ ಆಸ್ಪತ್ರೆಯ ಕೊಠಡಿಯೊಳಗೆ ಬೀಗ ಹಾಕಿಕೊಂಡರು.


ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ರೋಹಿತ್ ಅವರ ಅರ್ಹತೆ ಇಲ್ಲದಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಪಿ ತಿಳಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.