ಪಾಲ್ಗಾ ನದಿಯಲ್ಲಿ ತೇಲಿ ಬಿಡಲಾಗಿದ್ದ 317 ಮೊಬೈಲ್ ಫೋನ್ ವಶಪಡಿಸಿಕೊಂಡ BSF!
ವಶಪಡಿಸಿಕೊಂಡ 317 ಮೊಬೈಲ್ ಫೋನ್‌ಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಆಂಗ್ಲ ಬಜಾರ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ನವದೆಹಲಿ: ಪಾಲ್ಗಾ ನದಿಯಲ್ಲಿ ತೇಲಿ ಬಿಡಲಾಗಿದ್ದ ಬರೋಬ್ಬರಿ 317 ಮೊಬೈಲ್ ಫೋನ್‍ಗಳನ್ನು ಗಡಿ ಭದ್ರತಾ ಪಡೆ (BSF) ವಶಪಡಿಸಿಕೊಂಡಿದೆ. ಬಾಳೆ ದಿಂಡಿಗೆ ಕಟ್ಟಿದ ಪ್ಲಾಸ್ಟಿಕ್ ಕಂಟೈನರ್‌ಗಳಲ್ಲಿ ಮೊಬೈಲ್ ಫೋನ್‌ಗಳನ್ನು ಇಟ್ಟು ಬಾಂಗ್ಲಾದೇಶದ ಕಡೆಗೆ ಪಾಲ್ಗಾ ನದಿಯಲ್ಲಿ ತೇಲಿಬಿಡಲಾಗಿತ್ತು.
ಅಂದಾಜು 38 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 317 ಮೊಬೈಲ್ ಫೋನ್‌ಗಳನ್ನು BSF ಯೋಧರು ವಶಪಡಿಸಿಕೊಂಡಿದ್ದಾರೆ. ಬಾಂಗ್ಲಾದೇಶಕ್ಕೆ ಕಳ್ಳ ಸಾಗಣೆಯಾಗುತ್ತಿದ್ದ ಈ ಮೊಬೈಲ್‌ಗಳು ಪಾಲ್ಗಾ ನದಿಯಲ್ಲಿ ತೇಲುತ್ತಿದ್ದವು. ಏಕಕಾಲಕ್ಕೆ ಹಲವಾರು ಬಾಳೆ ದಿಂಡುಗಳು ನದಿಯಲ್ಲಿ ತೇಲುತ್ತಿರುವುದನ್ನು ಕಂಡು ಅನುಮಾನಗೊಂಡು ಪರಿಶೀಲಿಸಿದಾಗ ಮೊಬೈಲ್ ಫೋನ್‌ಗಳಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: Cheque Bounce: ಚೆಕ್ ಬೌನ್ಸ್‌ಗೆ ಕಡಿವಾಣ ಹಾಕಲು ಹೊಸ ನಿಯಮ ಜಾರಿ ಸಾಧ್ಯತೆ
ನದಿಯಲ್ಲಿ ತೇಲುತ್ತಿದ್ದ ಎಲ್ಲಾ ಬಾಳೆ ದಿಂಡುಗಳನ್ನು ಮೇಲಕ್ಕೆತ್ತಿದಾಗ ಒಟ್ಟು 317 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಇವು ಬಾಂಗ್ಲಾದೇಶದ ಕಡೆಗೆ ಸಾಗುತ್ತಿದ್ದವು. ಶನಿವಾರ ಸಂಜೆ 5:30ರ ಸುಮಾರಿಗೆ ದಕ್ಷಿಣ ಬಂಗಾಳದ ಗಡಿಯಲ್ಲಿರುವ 70ನೇ ಬೆಟಾಲಿಯನ್ ಸೈನಿಕರು ಈ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮೊಬೈಲ್ ಫೋನ್‌ಗಳು ಯಾರು ಕಳ್ಳಸಾಗಣೆ ಮಾಡುತ್ತಿದ್ದರು. ಯಾವ ಕಾರಣಕ್ಕಾಗಿ ಸಾಗಣೆ ಮಾಡುತ್ತಿದ್ದರು ಅನ್ನೋ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಈ ಬಗ್ಗೆ ತಮಗೆ ಗುಪ್ತಚರ ಮಾಹಿತಿ ಸಿಕ್ಕಿದೆ ಅಂತಾ 70ನೇ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ತಿಳಿಸಿದ್ದಾರೆ.
ಇದನ್ನೂ ಓದಿ: Amit Shah : ರೈತರಿಗೆ ಆದಾಯ ಡಬಲ್ : ಹೊಸ ಯೋಜನೆ ಘೋಷಿಸಿದ ಅಮಿತ್ ಶಾ
ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಆಂಗ್ಲ ಬಜಾರ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆ ತಡೆಯಲು ಬಿಎಸ್‌ಎಫ್ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಕಳ್ಳಸಾಗಣೆದಾರರನ್ನು ಪತ್ತೆ ಮಾಡಲು ತನಿಖೆ ನಡೆಯುತ್ತಿದೆ. ಕಾನೂನಿನಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.