ನವದೆಹಲಿ: ಬಿಹಾರದ ರಾಜಧಾನಿ ಪಾಟ್ನಾ ಬಳಿಯ ದಾನಾಪುರದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ ಕೆಲವೇ ಗಂಟೆಗಳ ನಂತರ, ಬಿಹಾರ ಪೊಲೀಸರು ಆರು ಮಹಿಳೆಯರು ಸೇರಿದಂತೆ 32 ಜನರನ್ನು ಬಂಧಿಸಿದ್ದಾರೆ. ಈ ಪ್ರದೇಶದಲ್ಲಿ ಮಕ್ಕಳ ಕಳ್ಳತನದ ಅನುಮಾನದ ಮೇಲೆ ವ್ಯಕ್ತಿಯನ್ನು ಹತ್ಯೆಗೈದರೆ ಇನ್ನಿಬ್ಬರನ್ನು ಥಳಿಸಲಾಯಿತು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಶನಿವಾರದಂದು ಈ ಘಟನೆ ನಡೆದಿದ್ದು, ಕೊಲೆ ಪ್ರಕರಣ ದಾಖಲಾದ ನಂತರ ಅವರನ್ನು ಬಂಧಿಸಲಾಗಿದೆ. ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ದೈಹಿಕವಾಗಿ ಅಂಗವಿಕಲವಿರುವ ವ್ಯಕ್ತಿಯನ್ನು ಥಳಿಸಿ ಕೊಂದಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತನನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.


ಈ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ತಲುಪಿದಾಗ, ಇಬ್ಬರನ್ನು ರಕ್ಷಿಸಲು ಅವರು ಪ್ರಯಾಸಪಡಬೇಕಾಯಿತು. ಘಟನೆಯಲ್ಲಿ ಎಎಸ್ಐ ಶ್ರೇಣಿಯ ಅಧಿಕಾರಿಯೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಈಗ ಈ ಘಟನೆ ಕುರಿತಾಗಿ ಮಾತನಾಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಈ ಕುರಿತು ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಜನರು ಯಾವುದೇ ರೀತಿಯ ವದಂತಿಯಿಂದ ದೂರವಿರಬೇಕು ಮತ್ತು ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಿವೆ ಎಂದು ಉಲ್ಲೇಖಿಸಿ ಸರ್ಕಾರ ಜಾಗೃತಿ ಮೂಡಿಸಬೇಕು ಎಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಹೇಳಿದೆ.


ಜೆಡಿಯು ನ ರಾಜೀವ್ ರಂಜನ್ ಮಾತನಾಡಿ ಸಮೂಹ ಸನ್ನಿ ಹತ್ಯೆ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದರು. ಇಂತಹ ವಿಷಯಗಳಲ್ಲಿ ಕಾರ್ಯ ನಿರ್ವಹಿಸುವಂತೆ ಪೊಲೀಸ್ ಇಲಾಖೆಗೆ ಸರ್ಕಾರ ನಿರ್ದೇಶನ ನೀಡಿದೆ ಎಂದರು. "ಇಂತಹ ಘಟನೆಗಳನ್ನು ತಡೆಯಲು ಪೊಲೀಸರು ಮತ್ತು ಆಡಳಿತ ಇಬ್ಬರೂ ಬದ್ಧರಾಗಿದ್ದಾರೆ" ಎಂದು ಅವರು ಹೇಳಿದರು.ಅಷ್ಟಕ್ಕೂ ದಾನಾಪುರದ ಪ್ರದೇಶದಲ್ಲಿ ನಡೆದ ಜನಸಮೂಹ ಹತ್ಯೆ ಪ್ರಕರಣ ಇದೇ ಮೊದಲೇನಲ್ಲ. ಜುಲೈ 30 ರಂದು ಮ್ಯಾನರ್‌ನಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಲಾಯಿತು. ಘಟನೆಯ ಸ್ವಲ್ಪ ಸಮಯದ ನಂತರ, ಬಿಹ್ತಾ ಪೊಲೀಸ್ ಠಾಣೆ ಪ್ರದೇಶದ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಜನಸಮೂಹದಿಂದ ನನಿರ್ಧಯವಾಗಿ ಥಳಿಸಲಾಯಿತು.